More

    ಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?

    ಜೊಹಾನ್ಸ್‌ಬರ್ಗ್/ನವದೆಹಲಿ: ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ, ಈಗಾಗಲೆ ಬಿಸಿಸಿಐನಲ್ಲಿ ಒಂದು ವರ್ಷಕ್ಕೂ ಕಡಿಮೆ ಅವಧಿಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದಾರೆ. ಈ ಯಶಸ್ವಿ ಆಡಳಿತವನ್ನು ಅವರು ಐಸಿಸಿಗೂ ವಿಸ್ತರಿಸುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಐಸಿಸಿಯ ಹಾಲಿ ಚೇರ್ಮನ್ ಶಶಾಂಕ್ ಮನೋಹರ್ ಅಧಿಕಾರಾವಧಿ ಈ ತಿಂಗಳು ಕೊನೆಯಾಗುತ್ತಿದ್ದು, ಅವರ ಉತ್ತರಾಧಿಕಾರಿ ಪಟ್ಟಕ್ಕೆ ಸೌರವ್ ಗಂಗೂಲಿ ಏರುವುದಾದರೆ ಅವರಿಗೆ ನಮ್ಮ ಪೂರ್ಣ ಬೆಂಬಲವಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್‌ಎ) ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

    ಇದನ್ನೂ ಓದಿ: ಸಚಿನ್ ಈಗ ಆಡುತ್ತಿದ್ದರೆ 1.30 ಲಕ್ಷ ರನ್ ಸಿಡಿಸುತ್ತಿದ್ದರಂತೆ!

    ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕರೂ ಆಗಿರುವ ಸ್ಮಿತ್ ಹೇಳಿಕೆಗೆ ಸಿಎಸ್‌ಎ ಸಿಇಒ ಜಾಕ್ಸ್ ೌಲ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಭಾರತೀಯರೇ ಐಸಿಸಿ ಚೇರ್ಮನ್ ಆಗುವುದಾದರೆ ನಮಗೇನೂ ತೊಂದರೆ ಇಲ್ಲ ಎಂದಿದ್ದಾರೆ. ಮುಂದಿನ ತಿಂಗಳು ನಿಗದಿಯಾಗಿರುವ ಐಸಿಸಿ ವಾರ್ಷಿಕ ಸಭೆ ನಡೆಯುವುದು ಅನುಮಾನವಾಗಿರುವ ಕಾರಣ, ಶಶಾಂಕ್ ಮತ್ತೆರಡು ತಿಂಗಳಿಗೆ ಹುದ್ದೆಯಲ್ಲಿ ಮುಂದುವರಿಯುವ ನಿರೀಕ್ಷೆಯೂ ಇದೆ. ಸದ್ಯದ ಪ್ರಕಾರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್, ಶಶಾಂಕ್ ಉತ್ತರಾಧಿಕಾರಿ ಪಟ್ಟಕ್ಕೆ ಫೇವರಿಟ್ ಅಭ್ಯರ್ಥಿಯಾಗಿದ್ದಾರೆ.

    ಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?

    ‘ಗಂಗೂಲಿ ಅವರಂಥ ವ್ಯಕ್ತಿ ಐಸಿಸಿ ಮುಖ್ಯಸ್ಥರಾಗುವುದು ಅಪೂರ್ವವೆನಿಸುತ್ತದೆ. ಇದೊಂದು ಉತ್ತಮ ಗೇಮ್ ಆಗುತ್ತದೆ. ಆಧುನಿಕ ಆಟಕ್ಕೂ ಇದು ಉತ್ತಮವಾದುದು. ಅವರು ಆಟವನ್ನು ಅರ್ಥಮಾಡಿಕೊಂಡಿದ್ದಾರೆ. ಉನ್ನತ ಮಟ್ಟದಲ್ಲಿ ಆಡಿದ್ದಾರೆ. ಗೌರವಿಸಲ್ಪಡುತ್ತಾರೆ. ಅವರ ನಾಯಕತ್ವ ಗುಣ ನಮಗೆ ಮುನ್ನಡೆಯಲು ನಿರ್ಣಾಯಕ ಅಂಶ’ ಎಂದು ಗ್ರೇಮ್ ಸ್ಮಿತ್ ಹೇಳಿದ್ದಾರೆ.

    ಇದನ್ನೂ ಓದಿ: ಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?

    ಬಿಸಿಸಿಐನಲ್ಲಿ ಅವಧಿ ಕೊನೆಗೊಳ್ಳುತ್ತಿದೆ
    ಕಳೆದ ಅಕ್ಟೋಬರ್‌ನಲ್ಲಿ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದರು. ಲೋಧಾ ಸಮಿತಿ ವರದಿಯ ಪ್ರಕಾರ ಗಂಗೂಲಿಗೆ 9 ತಿಂಗಳಷ್ಟೇ ಈ ಹುದ್ದೆಯಲ್ಲಿರಲು ಅವಕಾಶವಿದೆ. ಯಾಕೆಂದರೆ ಭಾರತದಲ್ಲಿ ಕ್ರಿಕೆಟ್ ಆಡಳಿತಾಧಿಕಾರಿಯಾಗಿ ಸತತ 6 ವರ್ಷಗಳ ಕಾಲ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಈ ಹಿಂದೆ ಬಂಗಾಳ ಕ್ರಿಕೆಟ್ ಸಂಸ್ಥೆ ಆಡಳಿತವನ್ನೂ ನೋಡಿಕೊಂಡಿರುವ ಗಂಗೂಲಿ, ಮಂಡಳಿಯ ಹಾಲಿ ಸಂವಿಧಾನದ ಪ್ರಕಾರ ಜೂನ್‌ನಲ್ಲಿ ಹುದ್ದೆ ತೊರೆಯಬೇಕಾಗುತ್ತದೆ. ಈ ನಿಯಮದ ಬದಲಾವಣೆಗಾಗಿ ಬಿಸಿಸಿಐ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ವಿಚಾರಣೆ ಮುಗಿಯುವ ಮುನ್ನ ಗಂಗೂಲಿ ಹುದ್ದೆ ತೊರೆದರೆ ಆಗ ಐಸಿಸಿ ಮೇಲೆ ಕಣ್ಣಿಡಬಹುದು.

    ಇದನ್ನೂ ಓದಿ: ಆಕಾಶ್ ಚೋಪ್ರಾರನ್ನು ಧೋನಿ ಅಭಿಮಾನಿಗಳು ಕಾಡುತ್ತಿರುವುದೇಕೆ?

    ಡೇವಿಡ್ ಗೋವರ್ ಕೂಡ ಬೆಂಬಲಿಸಿದ್ದರು
    ಇಂಗ್ಲೆಂಡ್‌ನ ಮಾಜಿ ನಾಯಕ ಡೇವಿಡ್ ಗೋವರ್ ಕೂಡ ಈ ಮುನ್ನ, ಉತ್ತಮ ರಾಜಕೀಯ ಕೌಶಲವನ್ನು ಹೊಂದಿರುವ ಸೌರವ್ ಗಂಗೂಲಿ ಮುಂದೊಂದು ದಿನ ಐಸಿಸಿ ಸಾರಥ್ಯ ವಹಿಸಲು ಸಮರ್ಥ ವ್ಯಕ್ತಿ ಎಂದು ಹೇಳಿದ್ದರು. ಐಸಿಸಿಗಿಂತ ಕಠಿಣವಾಗಿರುವ ಬಿಸಿಸಿಐ ಆಡಳಿತವನ್ನೇ ಗಂಗೂಲಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಬಿಲಿಯನ್ ಜನರ ಆಟವಾಗಿದೆ. ಅದನ್ನೇ ಅಮೋಘವಾಗಿ ನಿರ್ವಹಿಸಿರುವ ಗಂಗೂಲಿ, ಐಸಿಸಿಗೂ ಅರ್ಹ ವ್ಯಕ್ತಿ ಎಂದು ಗೋವರ್ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts