ಎಲ್ಲರನ್ನೂ ಸಮನಾಗಿ ಕಾಣುವುದು ಸಮ ಸಂಸ್ಕೃತಿ

kasapa
ಬಸವೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬಸವಣ್ಣನ ಶ್ರಮ ಸಂಸ್ಕೃತಿ-ಸಮ ಸಮಾಜ ವಿಷಯದ ಕುರಿತ ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿದರು. ಡಿ.ಎಂ.ಚಂದ್ರಶೇಖರ, ಎಚ್.ಟಿ.ಕೃಷ್ಣಮೂರ್ತಿ, ಡಿ.ಗಣೇಶ್, ಕೆ.ಎಸ್.ಅನುರಾಧಾ ಇದ್ದರು.
Published on

ಶಿವಮೊಗ್ಗ: ಪ್ರತಿಯೊಂದೂ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿರುವ ಈ ಸಂದರ್ಭ ಮಾನವೀಯ ನೆಲೆಗಳು ವಿಸ್ತೀರ್ಣವಾಗಬೇಕಿದೆ. ಇದಕ್ಕಾಗಿ ಬಸವಣ್ಣನವರ ವಚನಗಳು ಪ್ರೇರಣೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶುಕ್ರವಾರ ಬಸವೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬಸವಣ್ಣನವರ ಶ್ರಮ ಸಂಸ್ಕೃತಿ-ಸಮ ಸಮಾಜ ಎಂಬ ವಿಷಯದ ಕುರಿತ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣವನ್ನು ಬಸವಣ್ಣನ ವಚನಗಳು ಪ್ರತಿಪಾದಿಸುತ್ತವೆ. ಎಲ್ಲರನ್ನೂ ಸಮಾನವಾಗಿ ಕಾಣುವ ಸೌಜನ್ಯವನ್ನೂ ನಾವಿಂದು ಕಳೆದುಕೊಳ್ಳುವ ಸಂದರ್ಭದಲ್ಲಿದ್ದೇವೆ ಎಂದರು.
ಸಾಹಿತಿ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಎಲ್ಲರ ಬಾಯಲ್ಲಿ ಬಸವಣ್ಣನ ವಚನಗಳು ಪ್ರತಿಧ್ವನಿಸುತ್ತದೆ. ಅದರೆ ಎಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಆ ಸಾಲುಗಳು ಅನುಷ್ಠಾನಗೊಂಡಿದೆ ಎಂಬುದು ಚರ್ಚಿಸಬೇಕಾದ ಸಂಗತಿ. ಸಾಂಸ್ಕೃತಿಕ ನಾಯಕರಾದ ಬಸವಣ್ಣ ಸದಾ ಅನುಕರಣೀಯ ವ್ಯಕ್ತಿತ್ವ ಎಂದು ಹೇಳಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎಂ.ಚಂದ್ರಶೇಖರ, ಕಸಾಪ ಕಾರ್ಯದರ್ಶಿಗಳಾದ ಡಿ.ಗಣೇಶ್, ಎಂ.ಎಂ.ಸ್ವಾಮಿ, ತಾಲೂಕು ಕಸಾಪ ಕಾರ್ಯದರ್ಶಿ ಕೆ.ಎಸ್.ಅನುರಾಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net