

ಬನ್ನೂರು: ದಾನ ಮಾಡಿದಷ್ಟು ಸಂಪತ್ತು ಹೆಚ್ಚಾಗುತ್ತದೆ. ಪ್ರತಿಯೊಬ್ಬರಿಗೂ ಕೊಡುವಂತ ಮನಸ್ಸು ಇದ್ದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ರೋಟರಿಯ ನಾಮನಿರ್ದೇಶಿತ ಜಿಲ್ಲಾ ಗೌವರ್ನರ್ ರವಿಶಂಕರ್ ದಕೋಜು ತಿಳಿಸಿದರು.ಪಟ್ಟಣದ ಎಂ.ಎಂ ರಸ್ತೆಯಲ್ಲಿರುವ ಖಾಸಗಿ ಸಮುದಾಯ
ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ವತಿಯಿಂದ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆಯು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ, ಅದರಲ್ಲಿ ಸಂಪೂರ್ಣ ಯಶಸ್ಸು ಪಡೆಯುವ ತನಕ ಕಾರ್ಯನಿರ್ವಹಿಸುತ್ತದೆ ಎಂದರು.
ಪೋಲಿಯೋ ನಿರ್ಮೂಲನೆ ಕಾರ್ಯದಲ್ಲಿ ರೋಟರಿ ಪಾತ್ರ ಎಂತಹದ್ದು ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಬನ್ನೂರಿನಲ್ಲಿಯೂ ರೋಟರಿ ವತಿಯಿಂದ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.
ನೂತನ ಅಧ್ಯಕ್ಷ ವೆಂಕಟೇಶ ಮಾತನಾಡಿ, ಎಲ್ಲರ ಸಹಕಾರದಿಂದ ನನಗೆ ಈ ಬಾರಿ ಪದವಿ ದೊರೆತಿದ್ದು, ಸಿಕ್ಕಿರುವ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ರೋಟರಿ ನಡಿಗೆ ಎನ್ನುವಂತ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶುದ್ಧ ಕುಡಿಯುವ ನೀರು, ಜನರ ಆರೋಗ್ಯ ರಕ್ಷಣೆ ಹಾಗೂ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದು ಆದ್ಯತೆಯಾಗಿದೆ ಎಂದರು.
ವಿವೇಕಾನಂದ ಶಿಕ್ಷಣ ಸಂಸ್ಥೆ ಧರ್ಮದರ್ಶಿ ಎಂ.ಪ್ರಕಾಶ್, ಮಾಜಿ ಶಾಸಕ ಎಂ.ಅಶ್ವಿನ್ಕುಮಾರ್, ಜಿಲ್ಲಾ ಗೌವರ್ನರ್ ವಿಕ್ರಮದತ್ತ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಣಿಕ್ಚಂದ್ ಚೌಧರಿ, ಮಾಜಿ ರೋಟರಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ವನ್ಯ ರಾಜ್ಪುರೋಹಿತ್, ವಿರಾಟ್ ರಾಜ್ಪುರೋಹಿತ್, ಜಿ.ಸಂತೋಷ್ ಕುಮಾರಿ, ವೆಂಕಟೇಶ ಪ್ರಸಾದ್, ಕೆ.ಜಿ.ಮಹೇಶ್, ಕೆ.ಕೃಷ್ಣೇಗೌಡ, ಜಿ.ಪಿ.ಪ್ರಸನ್ನ, ಬಿ.ಸಿ.ಪಾರ್ಥಸಾರಥಿ, ವೈ.ಎಸ್.ರಾಮಸ್ವಾಮಿ, ಶಿವಣ್ಣ, ಖಯೂಂ, ಬಿ.ಎಸ್. ಯೋಗೇಂದ್ರ, ಜಯರಾಮೇಗೌಡ, ರಾಮಲಿಂಗೇಗೌಡ, ಎಸ್.ಶಿವಕುಮಾರಸ್ವಾಮಿ, ಕೆಂಪೇಗೌಡ, ಮುರಳೀಧರ, ಹನುಮಂತೇಗೌಡ, ರಾಜೇಶ್, ಪಿ.ಪ್ರಭಾಕರ್, ಪುರಸಭಾ ಸದಸ್ಯೆ ನಾಗರತ್ನ, ರಾಜೇಂದ್ರ ಮತ್ತಿತರರಿದ್ದರು.