ಪರಿಸರ ಸಂರಕ್ಷಣೆ ಪುಣ್ಯದ ಕೆಲಸ

sahyadri
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ.ಎನ್.ರಾಜೇಶ್ವರಿ, ಡಾ.ಕೆ.ಎನ್.ಮಂಜುನಾಥ್, ಡಾ.ಟಿ.ಅವಿನಾಶ್, ಡಾ.ಪರಿಸರ ನಾಗರಾಜ್, ಎಂ.ಸಿಂಧು, ಡಾ.ಚಂದ್ರಶೇಖರ್, ಡಾ.ಎಚ್.ಎಂ.ನಾಗರಾಜ ಮುಂತಾದವರಿದ್ದರು.
Published on

ಶಿವಮೊಗ್ಗ : ಪರಿಸರದ ಪೂಜೆ ನಿತ್ಯವೂ ನಡೆಯಬೇಕು. ಮುಂದಿನ ಪೀಳಿಗೆಗೂ ಪರಿಸರ ಉಳಿಯಬೇಕು. ಪ್ರಾಣಿ, ಪಕ್ಷಿಗಳು ನಮ್ಮೊಂದಿಗೆ ಜೀವಿಸುತ್ತವೆ. ಪರಿಸರವನ್ನು ಉಳಿಸುವುದೇ ಒಂದು ಪುಣ್ಯದ ಕೆಲಸ. ಇದೊಂದು ಪೂಜೆಯೂ ಹೌದು. ಸಂಸ್ಕಾರವೂ ಹೌದು ಎಂದು ಉಂಬ್ಳೆಬೈಲು ವೃತ್ತದ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿಂಧು ಹೇಳಿದರು.

ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಈ ಬಾರಿಯ ಧ್ಯೇಯವಾಕ್ಯ ಎಂದರು.

ಪ್ರಾಚಾರ್ಯ ಡಾ.ಟಿ.ಅವಿನಾಶ್ ಮಾತನಾಡಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ರಾಜೇಶ್ವರಿ, ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಶುಭಾ ಮರವಂತೆ, ಸಹ್ಯಾದ್ರಿ ಕಾಲೇಜಿನ ಎಸ್ಟೇಟ್ ವಿಭಾಗದ ನಿರ್ದೇಶಕ ಡಾ. ಕೆ.ಎನ್.ಮಂಜುನಾಥ್, ಬಯೋಟೆಕ್ ವಿಭಾಗದ ಜಿ.ಎಂ.ರಘು, ಪ್ರಾಧ್ಯಾಪಕರಾದ ಡಾ. ಎಚ್.ಎಂ.ನಾಗಾರ್ಜುನ, ಡಾ. ಚಂದ್ರಶೇಖರ, ಡಾ. ಪರಶುರಾಮ್, ಡಾ. ಪರಿಸರ ನಾಗರಾಜ್, ಡಾ. ಸರಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net