ಶಾಲೆಗೆ ತೆಂಗಿನ ಗಿಡ, ಬಿಂದಿಗೆ ಕೊಡುಗೆ

CHR plant
ಪರಿಸರ ದಿನಾಚರಣೆ ಅಂಗವಾಗಿ ಚೌಳಹಿರಿಯೂರಿನ ಕೆಪಿಎಸ್ ಶಾಲೆಯ ಗ್ರೀನ್‌ಪಾರ್ಕ್ ಮೈದಾನದಲ್ಲಿ ಎಚ್.ಸಿ.ಶಿವಶಂಕರ್ ತೆಂಗಿನ ಸಸಿ ನೆಟ್ಟರು. ಎಚ್.ಎಂ.ರುದ್ರೇಶ್, ಆರ್.ತಮ್ಮಯ್ಯ ಇತರರಿದ್ದರು.
Published on

ಚೌಳಹಿರಿಯೂರು: ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ಕೆಪಿಎಸ್ ಶಿಕ್ಷಕ ಎಚ್.ಎಂ.ರುದ್ರೇಶ್ ಹೇಳಿದರು.
ಕೆಪಿಎಸ್ ಆವರಣದಲ್ಲಿ ಬುಧವಾರ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಉಚಿತ 51 ತೆಂಗಿನ ಸಸಿ ನೀಡಿದ ಎಚ್.ಸಿ.ಶಿವಶಂಕರ್, ಗಿಡ ನೆಡಲು ಗುಂಡಿ ತೆಗಿಸಿಕೊಟ್ಟ ಎಚ್.ಪಿ.ಓಂಕಾರ್ ಹಾಗೂ ಗಿಡಕ್ಕೆ ನೀರು ಹಾಕಲು 10 ಬಿಂದಿಗೆ ನೀಡಿದ ಶಿಕ್ಷಕಿ ಚಂದ್ರಕಲಾ ಅವರ ಸಹಕಾರ ಶ್ಲಾಘನೀಯ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಸಿ.ಶಿವಶಂಕರ್ ಮಾತನಾಡಿ, ದಾನ ನೀಡುವುದು ದೊಡ್ಡತನವಲ್ಲ ಅವುಗಳನ್ನು ರಕ್ಷಿಸಿ ಬೆಳೆಸುವುದು ಹಿರಿದು. ಮೈದಾನದ ಸುತ್ತ ಹಾಕಿರುವ ತೆಂಗಿನ ಸಸಿಗಳಿಗೆ ದಾನಿಗಳ ಸಹಕಾರದಿಂದ ನೀರಿಗಾಗಿ ಪೈಪ್‌ಲೈನ್ ಮಾಡಿಕೊಡಲು ಪ್ರಯತ್ನ ಮಾಡುವ ಭರವಸೆ ನೀಡಿದರು.
ಪ್ರಾಚಾರ್ಯ ಆರ್.ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸಸಿ ಆರೈಕೆ ಮಾಡಿ ಬೆಳೆಸುವಂತೆ ಸಲಹೆ ನೀಡಿದರು. ಒಂದು ಮರ ಕಡಿದರೆ ನೂರು ಜನ ಅನಾರೋಗ್ಯಕ್ಕೆ ತುತ್ತಾದಂತೆ ಎಂದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net