

ಬೆಂಗಳೂರು: 2023ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾಸಂಕಲನಗಳನ್ನು ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ ಎಂದು ಈ ಹೊತ್ತಿಗೆ ಟ್ರಸ್ಟ್ ಸಂಚಾಲಕಿ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.
ವಿಜೇತ ಕಥಾ ಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಹೇಳಿರುವ ಅವರು ಆಸಕ್ತರು ಅಪ್ರಕಟಿತ ಕೃತಿಗಳನ್ನು ಕಳಿಸುವಾಗ ಅನುಸರಿಸಬೇಕಾದ ನಿಯಮಗಳನ್ನೂ ತಿಳಿಸಿದ್ದಾರೆ. ಅವು ಈ ಕೆಳಗಿನಂತಿದ್ದು, ಹೆಚ್ಚಿನ ಮಾಹಿತಿಗೆ 9611782621 ಸಂಪರ್ಕಿಸಬಹುದು ಎಂದೂ ಹೇಳಿದ್ದಾರೆ.