ಪಿಎಫ್ ಖಾತೆಗೆ ಶೇ.8.5 ಬಡ್ಡಿ

PF
Published on

ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್​ಒ) ಚಂದಾದಾರರಿಗೆ 2019-20ನೇ ಸಾಲಿನಲ್ಲಿ ಶೇಕಡ 8.5 ಬಡ್ಡಿ ನೀಡಲು ಕಾರ್ವಿುಕ ಸಚಿವಾಲಯ ನಿರ್ಧರಿಸಿದೆ. ಆರು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗೆ ಇದನ್ನು ವರ್ಗಾಯಿಸುವ ಪ್ರಕ್ರಿಯೆ ಗುರುವಾರ ಆರಂಭವಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2019-20ನೇ ಸಾಲಿಗೆ ಶೇ. 8.5 ಬಡ್ಡಿ ನೀಡಲು ಇಪಿಎಫ್​ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಕಳೆದ ಮಾರ್ಚ್​ನಲ್ಲಿ ನಿರ್ಧರಿಸಿತ್ತು. ಮೊದಲ ಕಂತಿನಲ್ಲಿ ಶೇ. 8.15 ಹಾಗೂ ನಂತರ ಶೇ. 0.35 ಮೊತ್ತವನ್ನು ಪಿಎಫ್ ಚಂದಾದಾರರ ಖಾತೆಗೆ ವರ್ಗಾಯಿಸಲು ಸೆಪ್ಟೆಂಬರ್​ನಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಒಂದೇ ಬಾರಿಗೆ ಪೂರ್ಣ ಮೊತ್ತವನ್ನು ಖಾತೆಗಳಿಗೆ ಸಂದಾಯ ಮಾಡಲು ಕಾರ್ವಿುಕ ಸಚಿವಾಲಯ ನಿರ್ಧರಿಸಿತ್ತು.

ಸಣ್ಣ ಉಳಿತಾಯ ಬಡ್ಡಿ ಯಥಾಸ್ಥಿತಿ: ಹೊಸ ವರ್ಷದ ಮೊದಲ ತ್ರೖೆಮಾಸಿಕದಲ್ಲಿ (ಜನವರಿಯಿಂದ ಮಾರ್ಚ್ ವರೆಗೆ) ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರದಲ್ಲಿ ಬದಲಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಬಡ್ಡಿ ದರ ಶೇಕಡ 7.1ರಲ್ಲೇ ಮುಂದುವರಿಯಲಿದೆ. ಹಿರಿಯ ನಾಗರಿಕರ ಠೇವಣಿ ಬಡ್ಡಿ ದರ ಶೇ. 7.4 ಆಗಿರುತ್ತದೆ. ಒಂದು ವರ್ಷದ ಠೇವಣಿ ಬಡ್ಡಿ ದರ ಶೇ. 5.5 ಆಗಿರಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2020ರ ಪ್ರಥಮಾರ್ಧದಲ್ಲಿ ರೆಪೋ ದರವನ್ನು 115 ಮೂಲಾಂಶ ಕಡಿತ ಮಾಡಿದ್ದರೂ ನಂತರದ ಅರ್ಧ ವರ್ಷದಲ್ಲಿ ಯಾವುದೇ ಕಡಿತ ಮಾಡಿರಲಿಲ್ಲ. ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 2020ರ ಜುಲೈ-ಸೆಪ್ಟೆಂಬರ್ ಹಾಗೂ ಅಕ್ಟೋಬರ್-ಡಿಸೆಂಬರ್ ತ್ರೖೆಮಾಸಿಕದಲ್ಲಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net