ಬ್ರೇಕ್ ಅಪ್ ರೂಮರ್ ಮಧ್ಯೆ ಕಾರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮಲೈಕಾ-ಅರ್ಜುನ್; ವಿಡಿಯೋ ವೈರಲ್

arjun
Published on

ಮುಂಬೈ: ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುವ ಜೋಡಿ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಬ್ರೇಕ್ ಅಪ್ ಆಗಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು. ಆದರೆ ಈ ವದಂತಿಗಳ ಹೊರತಾಗಿಯೂ, ಜೋಡಿ ಹಲವಾರು ಬಾರಿ ಒಟ್ಟಿಗೆ ಸಮಯವನ್ನು ಕಳೆಯುತ್ತಿದೆ. ಬ್ರೇಕಪ್ ವದಂತಿಗಳ ನಡುವೆ, ಇಬ್ಬರೂ ಶನಿವಾರ ಬೆಳಗ್ಗೆ ಮುಂಬೈನಲ್ಲಿ ಅಮೃತಾ ಅರೋರಾ ಅವರ ಪಾರ್ಟಿಯಿಂದ ಒಂದೇ ಕಾರಿನಲ್ಲಿ ಹೊರಟರು.

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬಹಳ ಸಮಯದ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯೂ ಇಬ್ಬರೂ ಒಟ್ಟಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಅರ್ಜುನ್ ಕಪೂರ್ ಮತ್ತು ಮಲೈಕಾ ಕಾರಿನ ಹಿಂದಿನ ಸೀಟಿನಲ್ಲಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಮಲೈಕಾ ಅರೋರಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಇದರೊಂದಿಗೆ ಅವರು ಮ್ಯಾಚಿಂಗ್ ಬ್ಲೇಜರ್ ಧರಿಸಿದ್ದರು. ಅರ್ಜುನ್ ಕಪೂರ್ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು.

ಈ ಹಿಂದೆ ಮಲೈಕಾ ಮತ್ತು ಅರ್ಜುನ್ ದೂರವಾಗಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಂಬಂಧವನ್ನು ಮುಂದಿನ ಹಂತಕ್ಕೆ (ಮದುವೆ) ಕೊಂಡೊಯ್ಯುವಲ್ಲಿನ ಭಿನ್ನಾಭಿಪ್ರಾಯಗಳು ಅವರ ಬ್ರೇಕಪ್​​​​​ ಹಿಂದಿನ ವದಂತಿಗೆ ಕಾರಣ. ವದಂತಿಗಳ ಪ್ರಕಾರ, ಇಬ್ಬರಲ್ಲಿ ಒಬ್ಬರು ಮದುವೆಯಾಗಲು ಬಯಸುತ್ತಾರೆ ಮತ್ತು ಇನ್ನೊಬ್ಬರು ಅದಕ್ಕೆ ಸಿದ್ಧವಾಗಿಲ್ಲ ಎನ್ನಲಾಗಿತ್ತು.

ಯಾವುದೇ ಸತ್ಯವಿಲ್ಲ 
ಮಲೈಕಾ ಮತ್ತು ಅರ್ಜುನ್ ಬ್ರೇಕಪ್ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಮೂಲವೊಂದು ಈ ತಿಂಗಳ ಆರಂಭದಲ್ಲಿ ಖಚಿತಪಡಿಸಿತ್ತು. ಇಬ್ಬರಲ್ಲಿ ಒಬ್ಬರು ಒಬ್ಬರೇ ಇರುವ ಏನನ್ನಾದರೂ ಪೋಸ್ಟ್ ಮಾಡುವುದನ್ನು ಜನರು ನೋಡಿದಾಗ, ಅವರು ಬೇರಾಗಿದ್ದಾರೆ ಎಂದು ಭಾವಿಸುತ್ತಿದ್ದರು. ಅಂದಹಾಗೆ ಮಲೈಕಾ ತನ್ನ ಸಹೋದರಿ ಅಮೃತಾ ಜೊತೆ ವಿಹಾರಕ್ಕೆ ಹೋಗಿದ್ದರು. ಮಲೈಕಾ ಮತ್ತು ಅರ್ಜುನ್ ಇಷ್ಟು ದಿನ ಒಟ್ಟಿಗೆ ಇದ್ದಾರೆ. ಅವರಿಗೆ ಇದ್ದಕ್ಕಿದ್ದಂತೆ ದೂರವಾಗುವ ಸಮಸ್ಯೆಗಳು ಏಕೆ ಬರುತ್ತವೆ. ಹಾಗಾಗಿ ಅವರು ಬೇರಾಗಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎನ್ನಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net