

ಮುಂಬೈ: ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಎಲ್ಲೆಡೆ ಭರ್ಜರಿ ಗಳಿಕೆ ಕಂಡಿದೆ. ಚಿತ್ರ ನೋಡಿದ ಪ್ರತಿಯೊಬ್ಬರು ಕಲಾವಿದರ ನಟನೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮ್‌ಗೋಪಾಲ್ ವರ್ಮಾ ಕೂಡ ಸಂದೀಪ್ ರೆಡ್ಡಿ ಚಿತ್ರ ಮಾಡುವ ಶೈಲಿಯನ್ನು ಬದಲಾಯಿಸಿದ್ದಾರೆ ಎಂದು ಹೊಗಳಿದರು.
ಇದುವರೆಗೂ ಟಾಲಿವುಡ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಟಾರ್ ಹೀರೋಗಳು, ನಿರ್ದೇಶಕರು ಮತ್ತು ನಿರ್ಮಾಪಕರು ಅನಿಮಲ್ ಬಗ್ಗೆ ಪ್ರತಿಕ್ರಿಯಿಸುತ್ತಾರೆಯೇ? ಕಾದು ನೋಡಬೇಕು. ಅನಿಮಲ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ಮಹೇಶ್ ಬಾಬು ಮತ್ತು ರಾಜಮೌಳಿ ಕೂಡ ಸಿನಿಮಾದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ. ಮಹೇಶ್ ಬಾಬು ಮತ್ತು ರಾಜಮೌಳಿ ಸಣ್ಣ ಚಿತ್ರಗಳಿಗೂ ಪ್ರತಿಕ್ರಿಯಿಸುತ್ತಾರೆ. ಆದರೆ ಅನಿಮಲ್ ಕುರಿತು ಇದುವರೆಗೆ ಪ್ರತಿಕ್ರಿಯಿಸಿಲ್ಲ. ಮತ್ತೊಂದೆಡೆ ಮೆಗಾಸ್ಟಾರ್ ಚಿರಂಜೀವಿ ಪ್ರತಿಕ್ರಿಯಿಸುತ್ತಾರಾ? ನೋಡಬೇಕಿದೆ.
ಸದ್ಯ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಂದೀಪ್ ರೆಡ್ಡಿ ವಂಗಾ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಸದ್ಯದಲ್ಲೇ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಸಿನಿಮಾ ಮಾಡಲಿದ್ದಾರಂತೆ. ಈ ಹಿನ್ನಲೆಯಲ್ಲಿ ಅಲ್ಲು ಅರ್ಜುನ್ ತಮ್ಮ ನಿರ್ದೇಶಕರ ಇತ್ತೀಚಿನ ಚಿತ್ರ ಅನಿಮಲ್ ವೀಕ್ಷಿಸಿ ವಿಮರ್ಶೆ ಮಾಡಿದ್ದಾರೆ. ಅನಿಮಲ್ ಸಿನಿಮಾ ಅದ್ಭುತ ಎಂದು ಅಲ್ಲು ಅರ್ಜುನ್ ಈ ಸಿನಿಮಾವನ್ನು ಹೊಗಳಿದ್ದಾರೆ.
ಅಲ್ಲು ಅರ್ಜುನ್ 'ಅನಿಮಲ್' ಚಿತ್ರದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ತಮ್ಮ ಅಧಿಕೃತ ಸಾಮಾಜಿಕ ಮಧ್ಯಮ ಖಾತೆಯಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅವರ ಹೆಸರನ್ನು ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅನಿಮಲ್... ಮನಸ್ಸಿಗೆ ಮುದ ನೀಡುವ ಸಿನಿಮಾ. ಈ ಸಿನಿಮಾ ನೋಡಿ ನಾನು ಮಾರುಹೋದೆ, ಅಭಿನಂದನೆಗಳು ಎಂದು ಸಂದೀಪ್ ರೆಡ್ಡಿ ವಂಗಾ ಅವರನ್ನು ಹೊಗಳಿದ್ದಾರೆ.
ರಣಬೀರ್ ಕಪೂರ್ ಅವರಿಗೆ ನಿಮ್ಮ ಅಭಿನಯದಿಂದ ಭಾರತೀಯ ಚಲನಚಿತ್ರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ತುಂಬಾ ಸ್ಪೂರ್ತಿದಾಯಕ. ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಕೊಂಡಾಡಿದ್ದಾರೆ.
ರಶ್ಮಿಕಾ ನೀವು ಅದ್ಭುತ. ಇಲ್ಲಿಯವರೆಗೆ ಮಾಡಿದ ಚಲನಚಿತ್ರಗಳಲ್ಲಿ ಇದು ನಿಮ್ಮ ಅತ್ಯುತ್ತಮ ಪ್ರದರ್ಶನವಾಗಿದೆ. ಇಂತಹ ಇನ್ನಷ್ಟು ಚಿತ್ರಗಳಲ್ಲಿ ಬರಲಿ ಎಂದು ಬಯಸುತ್ತೇನೆ ಎಂದು ವಿಶ್ ಮಾಡಿದ್ದಾರೆ.
ಬಾಬಿ ಡಿಯೋಲ್ ಜಿ ಅವರ ಅಭಿನಯ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತು. ಅನಿಲ್ ಕಪೂರ್ ಅವರ ನಟನೆ ಸೂಪರ್. ಯುವತಿ ತೃಪ್ತಿ ದಿಮ್ರಿ ಯುವಕರ ಮನ ಕದಿಯುತ್ತಾರೆ. ಇತರ ಕಲಾವಿದರು ಮತ್ತು ತಂತ್ರಜ್ಞರು ಸಹ ಅತ್ಯುತ್ತಮ ಅಭಿನಯ ತೋರಿದ್ದಾರೆ. ಶುಭಾಶಯಗಳು ಎಂದು ಹಾಡಿ ಹೊಗಳಿದ್ದಾರೆ.
ಏತನ್ಮಧ್ಯೆ, ಅಲ್ಲು ಅರ್ಜುನ್ ಅನಿಮಲ್ ಚಿತ್ರದ ವಿಮರ್ಶೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.