ಮನರಂಜಿಸಿದ ಸಿನಿ ಸಂಭ್ರಮ ಕಾರ್ಯಕ್ರಮ

cinema
ಸಿನಿ ಸಂಭ್ರಮ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಹೇಮಂತ್ ಹೆಗಡೆ, ರೇವಣಸಿದ್ದಯ್ಯ, ಭಾವನಾ, ಅಪೂರ್ವ ಮುಂತಾದವರಿದ್ದರು.
Published on

ಶಿವಮೊಗ್ಗ: ಯಾವುದೇ ಚಲನಚಿತ್ರಗಳಿಗೆ ಪುರಸ್ಕಾರಗಳು ಸುಲಭವಾಗಿ ಸಿಗುವುದಿಲ್ಲ. ಪುರಸ್ಕಾರ ಹಾಗೂ ಜನಮನ್ನಣೆಯ ಹಿಂದೆ ನಟ, ನಟಿಯರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಹತ್ತಾರು ಮಂದಿಯ ಪರಿಶ್ರಮವಿರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ‘ನಾ ನಿನ್ನ ಬಿಡಲಾರೆ’ ಚಿತ್ರ ತಂಡ ಹಮ್ಮಿಕೊಂಡಿದ್ದ ಸಿನಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದ ಜನರು ಕಲಾ ರಸಿಕರು ಮತ್ತು ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ಮನಸ್ಥಿತಿ ಉಳ್ಳವರು. ಈ ಸಿನಿಮಾವನ್ನೂ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿನಿ ಸಂಭ್ರಮದ ಭಾಗವಾಗಿ ಸೌಂದರ್ಯ ಸ್ಪರ್ಧೆ, ಅಂತರ ಕಾಲೇಜು ಫ್ಯಾಷನ್ ಶೋ, ಡ್ರಾಮಾ ಜೂನಿಯರ್ಸ್ ಮತ್ತು ಸೀನಿಯರ್ಸ್‌ಗಳಿಂದ ಮನರಂಜನೆ ಕಾರ್ಯಕ್ರಮ, ನೃತ್ಯಪ್ರದರ್ಶನ, ವಾಸುಕಿ ವೈಭವ್ ತಂಡದಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಟಿಯರಾದ ಭಾವನಾ, ಅಪೂರ್ವ, ನಟರಾದ ಶರತ್ ಲೋಹಿತಾಶ್ವ, ಕಿಶೋರ್ ಹಾಗೂ ರೇವಣಸಿದ್ದಯ್ಯ, ನಿರ್ದೇಶಕ ಹೇಮಂತ್ ಹೆಗಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net