ಪೌರಕಾರ್ಮಿಕರು ಮಾದಿಗ ಎಂದು ನಮೂದಿಸಲು ಮನವಿ

Dr BR Ambedkar
Published on

ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗದ ಒಳಮೀಸಲಾತಿ ಸಮೀಕ್ಷೆಯಲ್ಲಿ ಎಲ್ಲ ಪೌರಕಾರ್ಮಿಕರು ತಮ್ಮ ಜಾತಿಯನ್ನು ಮಾದಿಗ ಎಂದೇ ನಮೂದಿಸಬೇಕು. ಆ ಮೂಲಕ ಹೆಚ್ಚಿನ ಸೌಲಭ್ಯ ಹೊಂದಲು ಮುಂದಾಗಬೇಕು ಎಂದು ಆದಿದ್ರಾವಿಡ ಪೌರಕಾರ್ಮಿಕ ಯುವಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಸ್. ಸುಬ್ರಹ್ಮಣಿ ಮನವಿ ಮಾಡಿದರು.

ಮನೆ ಮನೆ ಸಮೀಕ್ಷೆ ಅತ್ಯಂತ ಪ್ರಮುಖವಾಗಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಪೌರಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಎಂ.ವಿ. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಜಾಂಬವ ಎಂಬ ಜಾತಿ ಪ್ರಮಾಣ ಪತ್ರ ಇದೆ. ಕಳೆದ 30 ವರ್ಷಗಳ ಹೋರಾಟದ ಫಲವಾಗಿ ಇಡೀ ದೇಶದಾದ್ಯಂತವೂ ಸಮೀಕ್ಷೆ ನಡೆಯುವ ಸಾಧ್ಯತೆ ಇದೆ. ಆದರೆ ಮೂಲ ಮಾದಿಗರು ಪೌರ ಕಾರ್ಮಿಕ ವೃತ್ತಿಯಲ್ಲಿದ್ದಾರೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಮೂಲ ಮಾದಿಗರೇ ಆಗಿರುವ ಕಾರಣ ಮೂಲ ಜಾತಿ ಮಾದಿಗ ಎಂದು ಬರೆಸುವಂತೆ ಕೋರಿದರು. ಮುಖಂಡರಾದ ಕೆ.ವಿ. ಸುಬ್ರಹ್ಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net