

H1BClampdown: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು H1-B ವೀಸಾ ಅರ್ಜಿಗಳ ಮೇಲೆ $100,000 ಶುಲ್ಕವನ್ನು ಘೋಷಿಸಿರುವುದಕ್ಕೆ ಆಮ್ ಆದ್ಮಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಪ್ ನಾಯಕ ಸೌರಭ್ ಭಾರದ್ವಾಜ್, ಅಮೆರಿಕದಲ್ಲಿ ವಾಸಿಸುವ ಭಾರತೀಯರು ಅಮೃತ್ ಕಾಲದಲ್ಲಿ ಭಾರತಕ್ಕೆ ಬಂದಿದ್ದೇವೆ ಎಂದುಕೊಳ್ಳಲು ಇದು ಒಂದು ಅವಕಾಶ, ಈಗ ಭಾರತಕ್ಕೆ ಹಿಂತಿರುಗಿ ಅಮೃತ್ ಕಾಲವನ್ನು ಆನಂದಿಸಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಪೊಲೀಸ್ ಹೆಸರಲ್ಲಿ ವಿಡಿಯೋ ಕರೆ ಮಾಡಿ ವಂಚನೆ
ಭಾರತದ ಆರ್ಥಿಕತೆ ಮತ್ತು ಜಾಗತಿಕ ಸ್ಥಿತಿಗೆ ಸುವರ್ಣ ಯುಗ ಎಂದು ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಬಳಸಿದ "ಅಮೃತಕಾಲ" ಎಂಬ ಪದವನ್ನು ಸರ್ಕಾರ ಪದೇ ಪದೇ ಉಲ್ಲೇಖಿಸಿರುವುದನ್ನು ಎಎಪಿ ನಾಯಕ ಈ ವೇಳೆ ಪ್ರಸ್ತಾಪಿಸಿದರು.
ಟ್ರಂಪ್ ಶುಲ್ಕವನ್ನು 100,000 ಡಾಲರ್‌ಗೆ ಅಂದರೆ ಸುಮಾರು 9,000,000 ರೂ.ಗಳಿಗೆ ಹೆಚ್ಚಿಸಿದ್ದಾರೆ, ಇದರಿಂದ ಅಮೆರಿಕದ ಕಂಪನಿಗಳು ಭಾರತೀಯ ಐಟಿ ವೃತ್ತಿಪರರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸುತ್ತವೆ. ಮೋದಿ ಭಾರತವನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ದಿದ್ದಾರೆ ಎಂದು ಭಾವಿಸಿರುವ ಜನರು ಒಮ್ಮೆ ಹಿಂತಿರುಗಿ ಭಾರತ ಹೇಗಿದೆ ಮತ್ತು ಅಮೃತಕಾಲ ಹೇಗಿದೆ ಎಂಬುದನ್ನು ಸ್ವತಃ ನೋಡಬಹುದು ಎಂದರು. ಆರ್ಥಿಕ ಪ್ರಗತಿಯ ಬಗ್ಗೆ ಸರ್ಕಾರದ ಹೇಳಿಕೆಗಳ ಬಗ್ಗೆ ಪಕ್ಷದ ಟೀಕೆಯನ್ನು ಒತ್ತಿಹೇಳಿದ ಭಾರದ್ವಾಜ್, ಅಮೃತಕಾಲವನ್ನು ಜನರು ನೇರವಾಗಿ ಅನುಭವಿಸಲು ಅವಕಾಶ ಮಾಡಿಕೊಟ್ಟ ಟ್ರಂಪ್ ಆಡಳಿತಕ್ಕೆ ಬಿಜೆಪಿ ನಿಜವಾಗಲೂ ಧನ್ಯವಾದ ಹೇಳಬೇಕು ಎಂದು ಅವರು ಹೇಳಿದರು.
ಭಾನುವಾರ ಸೆಪ್ಟೆಂಬರ್ 21 ರ ಮಧ್ಯರಾತ್ರಿ 12:01 ರಿಂದ ಜಾರಿಗೆ ಬರುವ ಈ ಆದೇಶವು ಅನುಸರಣೆಗೆ ಕೇವಲ ಒಂದು ದಿನದ ಸಮಯವನ್ನು ಮಾತ್ರ ನೀಡುತ್ತದೆ ಮತ್ತು ಇದು ಕಳವಳಕಾರಿಯಾಗಿದೆ ಎಂದು ಐಟಿ ಸಂಸ್ಥೆ ಹೇಳಿಕೊಂಡಿವೆ.(ಏಜೆನ್ಸೀಸ್)