

1. ಆ ಬೆಕ್ಕುಗಳು ನಮ್ಮ ಲವ್ ಬರ್ಡ್ಸ್ನ್ನು ತಿಂದುಹಾಕಬಹುದು. ಅವುಗಳನ್ನು ವಠಾರದಿಂದ ಹೊರಗೆ ಓಡಿಸಿಬಿಡಿ.
Those cats may eat away the love birds. Please chase them out of the compound.
2. ಆಕೆ ಇನ್ನೊಬ್ಬ ಗಂಡಸಿಗೆ ತನ್ನ ಮುಖವನ್ನೂ ತೋರಿಸಲು ತಯಾರಿಲ್ಲದ ಒಬ್ಬ ಪತಿವ್ರತೆ.
She is a chaste woman who is not ready even to show her face to another man.
3. ಬ್ರಹ್ಮಚರ್ಯ ಕಟ್ಟುನಿಟ್ಟಾಗಿ ಪಾಲಿಸಿದ್ದೇನೆಂದು ಎದೆತಟ್ಟಿ ಹೇಳುವ ಸ್ವಾಮೀಜಿ ಅವರೊಬ್ಬರೇ!
He is the only abbot who struts his stuff in strictly observing chastity!
4. ತಾನು ತನ್ನ ಗೆಳತಿಯರೊಡನೆ ಮಾತನಾಡುತ್ತಾ ಸಮಯ ಕಳೆಯುವೆನೆಂದು ರಮ್ಯ ಹೇಳಿದಳು.
Ramya said, she would spend her time chattering away to her friends.
5. ನೀನು ನಿನ್ನ ಗೆಳತಿಯೊಡನೆ ಹರಟುತ್ತಿದ್ದೆಯಾ?
Were you chatting with your friend?
6.ಮಡಿಕೇರಿಯಲ್ಲಿ ಎಷ್ಟು ತೀವ್ರ ಚಳಿ ಇತ್ತೆಂದರೆ ಮಾತನಾಡಲಾಗದಂತೆ ನನ್ನ ಹಲ್ಲುಗಳು ಕಟಕಟನೆ ಹೊಡೆದುಕೊಳ್ಳುತ್ತಿದ್ದವು.
It was so cold in Madikeri that I could hardly talk as my teeth were chattering.
7. ಆ ಮೂಲೆಯಲ್ಲಿ ಕಡಿಮೆ ಬೆಲೆಯ ಆದರೆ ಆಹ್ಲಾದಕರವಾದ ಆಹಾರ ಒದಗಿಸುವ ಹೋಟೆಲ್ ಒಂದಿದೆ.
There is a restaurant round the corner that serves cheap but cheerful food.