ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

English vvani
Published on

1. ಸ್ವಲ್ಪ ಹೊತ್ತಿನ ಮೊದಲು ನೀರು ಕುದಿದು ಕಡಿಮೆಯಾಗಿತ್ತು, ಈಗ ಪೂರಾ ನೀರು ಆವಿಯಾಗಿದೆ.

A few minutes ago it was boiling down, now it’s boiled away.

2.ಹಾಲನ್ನು ಸ್ವಲ್ಪ ನೋಡುತ್ತಿರು, ಎಲ್ಲಾದರೂ ಕುದಿದು ಉಕ್ಕಲು ಆರಂಭಿಸಿದರೆ ಸ್ಟವ್​ನ್ನು ನಂದಿಸು.

Please be watching the milk, if it boils over, turn off the stove.

3.ತುಂಬ ಕಷ್ಟದ ಶಬ್ದಗಳನ್ನು ಬಳಸಿರುವುದರಿಂದ ಅವರ ಅಂಕಣಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟಕರ.

It’s very difficult to understand his articles as being bombastic.

4.ಕಾರಿನ ಬಾನೆಟ್ ಕೆಳಗಿನಿಂದ ಹೊಗೆಯ ಮೋಡಗಳೇ ಬರುವುದನ್ನು ನೋಡಿ ನಾನು ಜಾಗರೂಕನಾದೆ.

I was alarmed by the clouds of smoke coming out under the bonnet.

5.ಇಲ್ಲಿನ ಒಂದು ಒಳ್ಳೆಯ ಹೋಟೆಲಿನಲ್ಲಿ ನಿಮಗಾಗಿ ಕೋಣೆ ಕಾದಿರಿಸಬೇಕೆ?

Would you like me to book you in at some good hotel here?

6.ಹೋಟೆಲಿಗೆ ಬಂದು ರಿಜಿಸ್ಟರಿನಲ್ಲಿ ಸಹಿ ಹಾಕಿ ಕೋಣೆ ಸೇರಿದೊಡನೆ ನನಗೆ ಕರೆ ಮಾಡಿ, ನಾನು ಬರುತ್ತೇನೆ.

Please call me after booking into the hotel and I’ll come there. / Please call me after you have booked in at the hotel and I’ll come there.

7.ಆ ಮಗು ಹುಟ್ಟುವಾಗಲೇ ಕುರುಡ / ಕಿವುಡ / ಮೂಗ ಆಗಿತ್ತು.

That child was born blind / deaf / dumb.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net