ಸಬೂಬು ಹೇಳಿದ ಇಂಜಿನಿಯರ್​ಗಳಿಗೆ ತರಾಟೆ

rdpr meeting
ಕೋಲಾರ ನಗರದ ಜಿ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಂಚಾಯತ್​ ರಾಜ್​ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ಮಾತನಾಡಿದರು. ಉಪ ಕಾರ್ಯದರ್ಶಿ ರಮೇಶ್​ ಇದ್ದರು.
Published on

ಕೋಲಾರ: ಗ್ರಾಪಂ ವ್ಯಾಪ್ತಿಯಲ್ಲಿನ ಕಟ್ಟಡ, ಕೊಳವೆಬಾವಿಗಳಿಗೆ ವಿದ್ಯುತ್​ ಮೀಟರ್​ ಅಳವಡಿಕೆಗೆ ಸಬೂಬು ಹೇಳುತ್ತಿದ್ದ ಬೆಸ್ಕಾಂ ಇಂಜಿನಿಯರ್​ಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಂಚಾಯತ್​ ರಾಜ್​ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಗಿತಗೊಂಡಿರುವ ಆರ್​ಆರ್​ ಸಂಖ್ಯೆ ರದ್ದುಪಡಿಸಬೇಕು, ಸಕಾಲಕ್ಕೆ ಪಂಚಾಯಿತಿಗೆ ಬಿಲ್​ ಕೊಟ್ಟು ಮೊತ್ತ ಪಡೆಯಬೇಕು ಎಂದು ಸೂಚಿಸಿದರು.

ಕುಸುಮ್​ ಯೋಜನೆಯಡಿ ಕೆಲವೆಡೆ ಜಾಗ ಕೇಳಲಾಗಿದೆ, ಸರ್ಕಾರದ ಜಾಗ ಲಭ್ಯವಾಗದ ಕಡೆಗಳಲ್ಲಿ ಕೆರೆ ಅಂಗಳದಲ್ಲಿ ಜಾಗ ಗುರುತಿಸಿ ಕೊಡಬಹುದು ಎಂದರು.

ಈ ಮಧ್ಯೆ ಪ್ರವೇಶಿಸಿದ ಕೆಲ ಪಿಡಿಒಗಳು, ಬೆಸ್ಕಾಂ ಸಿಬ್ಬಂದಿ ಸಮರ್ಪಕವಾಗಿ ಪಂಚಾಯಿತಿಗೆ ಬಿಲ್​ ನೀಡುತ್ತಿಲ್ಲ. 5&6 ತಿಂಗಳಿಗೊಮ್ಮೆ ಬಿಲ್​ ಕಟ್ಟಿ ಅಂತ ಬರುತ್ತಾರೆ ಎಂದು ದೂರಿದರು.

ವಡಗೂರು ಪಿಡಿಒ ರಮೇಶ್​ ಮಾತನಾಡಿ, ವಡಗೂರು ಗ್ರಾಪಂ ವ್ಯಾಪ್ತಿಯಲ್ಲಿ ಹೆದ್ದಾರಿ ಸಮೀಪವೇ ಜಾಗವಿದೆ, ಅದು ಬೆಸ್ಕಾಂ ಉಪ ಟಕಕ್ಕೂ ಸಮೀಪವಿದೆ. ಕುಸುಮ್​ ಯೋಜನೆಯಡಿ ಸೋಲಾರ ಟಕ ಸ್ಥಾಪನೆ ಮಾಡಿದರೆ ಉತ್ತಮ ಆದಾಯ ಬರುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಇಂಜಿನಿಯರ್​, ಈಗಾಗಲೇ ಮೂರು ಹಂತದಲ್ಲಿ ಜಾಗ ಕೇಳಲಾಗಿದೆ. ಕೆಪಿಟಿಸಿಎಲ್​ ಬೋರ್ಡ್​ ಸಭೆಯಲ್ಲಿ ಇತ್ಯರ್ಥವಾಗಿ ಎಲ್ಲಿ ಜಾಗಬೇಕು ಎಂಬುದರ ಬಗ್ಗೆ ತೀರ್ಮಾನ ಆಗಬೇಕು, ಜಾಗ ಅಂತಿಮವಾದರೆ ಕಾಪೋರ್ರೇಟ್​ ಹಂತದಲ್ಲಿ ಟೆಂಡರ್​ ಆಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಗರಂ ಆದ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ, ನೀವು ಸಹ ಇಲಾಖೆಯ ಅಧಿಕಾರಿ. ನಿಮ್ಮದು ಪ್ರತ್ಯೇಕ ಸಾಮ್ರಾಜ್ಯವಲ್ಲ, ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿ, ಕೆಲಸದಲ್ಲಿ ಜವಾಬ್ದಾರಿ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು.

ನರೇಗಾದಡಿ ಕೆಲಸಕ್ಕೆ ಹೋಗುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಸ್ಥಾಪನೆ ಮಾಡಲಾಗಿದೆ. ಆದರೆ ಬಹುತೇಕ ಕಡೆ ಮಕ್ಕಳ ಸಂಖ್ಯೆ ಕಡಿಮೆಯಿದೆ. ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಣೆ ಆಗುತ್ತಿದಿಯೋ ಇಲ್ಲವೊ ಎಂಬುದರ ಬಗ್ಗೆ ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಡಾ.ಪ್ರವಿಣ್​ ಪಿ.ಬಾಗೇವಾಡಿ ತಿಳಿಸಿದರು.

* ನಿರ್ಲಕ್ಷ್ಯ ಮುಂದುವರಿದರೆ ಶಿಸ್ತು ಕ್ರಮ

ಪಿಡಿಒಗಳು ಚೆಕ್​ಗೆ ಸಹಿ ಮಾಡುವಾಗ ಯಾವುದರ ವೆಚ್ಚಕ್ಕೆ ಎಂದು ಪರಿಶೀಲನೆ ಮಾಡಬೇಕು. ನಾವು ಮೇಲಧಿಕಾರಿಗಳಿಗೆ ಉತ್ತರ ಕೊಡಬೇಕು. ನಾವು ನಮ್ಮ ಸಾಧನೆನ ತೋರಿಸಬೇಕು. ರ್ನಿಲಕ್ಷ$್ಯ ಮುಂದುವರಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಜಿಪಂ ಸಿಇಒ ಎಚ್ಚರಿಕೆ ನೀಡಿದರು.

* ಗ್ರಾಪಂಗೆ ಪಿಡಿಒ ಬಾಸ್​

ಗ್ರಾಮ ಪಂಚಾಯಿತಿಗೆ ಪಿಡಿಒನೆ ಬಾಸ್​, ಸಿಬ್ಬಂದಿಯಿಂದ ಕೆಲಸ ಮಾಡಿಸುವ ಜವಾಬ್ದಾರಿ ಪಿಡಿಒಗಳ ಮೇಲಿದೆ. ಪ್ರಗತಿ ಸಾಧನೆಯಾಗಿಲ್ಲ ಅಂದರೆ ಇಒಗಳನ್ನು ಹೊಣೆ ಮಾಡಲಾಗುತ್ತದೆ. ನೋಟಿಸಿಗೂ ಮಣಿಯದಿದ್ದರೆ ಅಮಾನತಿಗೆ ಶಿಫಾರಸು ಮಾಡಿ. ತೆರಿಗೆ ವಸೂಲಿಯಲ್ಲಿ ಗುರಿ ಸಾಧಸಲು ಸೂಚಿಸಿದ್ದರೂ ಶ್ರೀನಿವಾಸಪುರ, ಕೋಲಾರ ತಾಲೂಕು ತೆರಿಗೆ ವಸೂಲಿಯಲ್ಲಿ ಹಿಂದುಳಿದಿದೆ. ಬಾಕಿ ಇರುವ ತೆರಿಗೆ ವಸೂಲಿ ಮಾಡಿ ಪಂಚಾಯಿತಿ ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಡಾ.ಪ್ರವಿಣ್​ ಬಾಗೇವಾಡಿ ಸೂಚಿಸಿದರು.

*ಸಕಾಲಕ್ಕೆ ಫಲಾನುಭವಿಗಳ ಮಾಹಿತಿ ನೀಡಿ

ಉಪ ಕಾರ್ಯದರ್ಶಿ ರಮೇಶ್​ ಮಾತನಾಡಿ, ಪಂಚಾಯಿತಿವಾರು ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಆದರೆ ಕೆಲಸ ಪ್ರಗತಿಯಲ್ಲಿ ಹಿಂದೆ ಉಳಿಯಲಾಗಿದೆ. ಕಳೆದ 3 ವರ್ಷಗಳ ಹಿಂದಿನ ಕಾಮಗಾರಿಗಳ ಬಿಲ್​ ಬಾಕಿ ಉಳಿದುಕೊಂಡಿದೆ. ನರೇಗಾ ಸಿಬ್ಬಂದಿ ಸಕಾಲಕ್ಕೆ ಲಾನುಭವಿಗಳ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net