

ಶಿವಮೊಗ್ಗ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸೆ.15ರ ಬೆಳಗ್ಗೆ 10.30ಕ್ಕೆ ಇಂಜಿನಿಯರ್‌ಗಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಹೆಸರಾಂತ ಕೈಗಾರಿಕೋದ್ಯಮಿಗಳು, ಕಠಿಣ ಪರಿಶ್ರಮ ವಹಿಸುತ್ತಿರುವ ಕಾರ್ಮಿಕರನ್ನೂ ಗೌರವಿಸಲಾಗುವುದು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಉದ್ಘಾಟಿಸಲಿದ್ದಾರೆ. ಐಐಎಫ್‌ನ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2023ನೇ ಸಾಲಿನ ವಾಣಿಜ್ಯ ಪ್ರಶಸ್ತಿ, ವಿಶೇಷ ಗೌರವಾರ್ಪಣೆ, ವಿಶೇಷ ಸನ್ಮಾನ, ಅತ್ಯುತ್ತಮ ಕಾರ್ಮಿಕ ಪ್ರಶಸ್ರಿ ಪ್ರದಾನ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ ಎಂ.ವಿ. ಜನ್ಮದಿನದ ಅಂಗವಾಗಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರ ಹೆಸರನ್ನು ಪ್ರಕಟಿಸಿದರು.
ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಖಜಾಂಚಿ ಎಂ.ರಾಜು, ನಿರ್ದೇಶಕರಾದ ಬಿ.ಆರ್.ಸಂತೋಷ್, ಇ.ಪರಮೇಶ್ವರ್, ಪ್ರದೀಪ್ ವಿ.ಯಲಿ, ಮಾಜಿ ಅಧ್ಯಕ್ಷರಾದ ಅಶ್ವತ್ಥನಾರಾಯಣ ಶೆಟ್ಟಿ, ಡಿ.ಎಂ.ಶಂಕರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಕೈಗಾರಿಕೋದ್ಯಮಿ ಪ್ರಶಸ್ತಿ ಪಡೆದ ಕಂಪನಿಗಳು: ಪ್ರಣವ್ ಪ್ಯಾಕೇಜಿಂಗ್-ನಿಧಿಗೆ, ಶಿವಾಜಿ ಆಗ್ರೋ ಕಾಂಪೊನೆಂಟ್ಸ್, ಕಲ್ಲೂರು-ಮಂಡ್ಲಿ, ಎನ್.ಎನ್.ಇಂಜಿನಿಯರಿಂಗ್-ಆಟೋ ಕಾಂಪ್ಲೆಕ್ಸ್.
ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ:ಕೆ.ವೇದನಾಥನ್, ಮೆಷಿನ್‌ಶಾಪ್ ಸೂಪರ್‌ವೈಸರ್, ಪ್ರಾರ್ಥನಾ ಇಂಜಿನಿಯರಿಂಗ್. ಸಿ.ವೀರೇಂದ್ರ, ಇನ್‌ಚಾರ್ಜ್ ಮೆಷಿನ್‌ಶಾಪ್, ವೋಲ್‌ಮ್ಯಾಕ್ ಕಾಂಪೊನೆಂಟ್ಸ್.
ವಿಶೇಷ ಗೌರವಾರ್ಪಣೆ: ಎಚ್.ಎಂ.ಲೀಲಾಮೂರ್ತಿ, ಹಾರ‌್ನಳ್ಳಿ ಕೆ.ಮಂಜಪ್ಪ ಅಂಡ್ ಕೋ.
ವಿಶೇಷ ಸನ್ಮಾನ:ಡಿ.ಜಿ.ಬೆನಕಪ್ಪ, ಕಾರ್ಯಕಾರಿ ನಿರ್ದೇಶಕ, ವಿಜಯ್ ಟೆಕ್ನೋಕ್ರಾಟ್.