

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೃತ್ತಿಪರ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳ ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಆರಂಭಿಸಿದೆ. ಶನಿವಾರ ಸಂಜೆ ವೈದ್ಯಕೀಯ ಕೋರ್ಸ್‌ಗಳಿಗೆ ಆರಂಭವಾಗಿದ್ದು, ಭಾನುವಾರ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಆರಂಭವಾಗಲಿದೆ.
3 ಸಾವಿರ ಬಿಇ ಸೀಟುಗಳು ಕಡಿತ
2013-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಶನಿವಾರ ಸಂಜೆಯ ಮಾಹಿತಿ ಪ್ರಕಾರ, 215 ಕಾಲೇಜುಗಳಿಂದ 62,166 ಇಂಜಿನಿಯರಿಂಗ್ ಸೀಟುಗಳು ಲಭ್ಯವಾಗಿವೆ. ಅಂದರೆ, ಕಳೆದ ವರ್ಷಕ್ಕಿಂತ 3 ಸಾವಿರ ಸೀಟುಗಳು ಕಡಿತವಾಗಿವೆ.
ವಿವಿಧ ಕಾಲೇಜುಗಳಲ್ಲಿ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ವ್ಯತ್ಯಾಸಗಳಾದ ಹಿನ್ನೆಲೆಯಲ್ಲಿ ಸೀಟುಗಳು ಕಡಿತವಾಗಿವೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ವರ್ಷ ಇಂಜಿನಿಯರಿಂಗ್‌ಗೆ ಒಟ್ಟು 65,292 ಸೀಟುಗಳು ಲಭ್ಯವಿದ್ದವು. ಈ ಪೈಕಿ 50,293 ಸೀಟುಗಳು ಭರ್ತಿಯಾಗಿದ್ದವು. 14,999 ಸೀಟುಗಳು ಭರ್ತಿಯಾಗಿದ್ದವು.
ಈ ವರ್ಷ ವಾಸ್ತುಶಿಲ್ಪದಲ್ಲಿ 40 ಕಾಲೇಜುಗಳಿಂದ 1,038 ಸೀಟು ದೊರೆಯಲಿವೆ.
ವೇಳಾಪಟ್ಟಿ
ಆ.6 ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರ ಪ್ರಕಟ
ಆ.6 ಅಭ್ಯರ್ಥಿಯು ಅರ್ಹತೆ ಇರುವ ಎಲ್ಲ ಕೋರ್ಸ್‌ಗಳಿಗೆ ಆಯ್ಕೆಯನ್ನು ದಾಖಲಿಸುವುದು
ಆ.11 ಅಣಕು ಸೀಟು ಹಂಚಿಕೆ
ಆ.11 ಆಯ್ಕೆಗಳ ತಿದ್ದುಪಡಿಗೆ ಅವಕಾಶ
ಆ.16 ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆ ಲಿತಾಂಶ ಪ್ರಕಟ
ಮೊದಲನೇ ಸುತ್ತಿನಲ್ಲಿ ಆಯುರ್ವೇದ ಸೀಟು ಹಂಚಿಕೆ ಇಲ್ಲ ಅದ್ಯಕ್ಕೆ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಅರ್ಕಿಟೆಕ್ಚರ್, ಬಿ.ಾರ್ಮ, ಾರ್ಮ-ಡಿ. ಕೃಷಿ ವಿಜ್ಞಾನ ಕೋರ್ಸ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ಮತ್ತು ನ್ಯಾಚುರೋಪಥಿ ಹಾಗೂ ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ವಿವರವನ್ನು ಸರ್ಕಾರ ಇನ್ನೂ ನೀಡಿರುವುದಿಲ್ಲ. ಇದು ಪ್ರಾಧಿಕಾರಕ್ಕೆ ಬಂದ ನಂತರ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ತಿಳಿಸುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳು ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಪಾಲ್ಗೊಳ್ಳುವ ವೇಳೆ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಿ. ಕಾಲೇಜು ಮತ್ತು ಕೋರ್ಸಿ ಸ್ಪಷ್ಟತೆ ಸಿಕ್ಕ ಬಳಿಕ ಆಯ್ಕೆಯನ್ನು ಮಾಡಿಕೊಳ್ಳಿ. - ಎಸ್. ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿದೇಶಕಿ