ಇಂಜಿನಿಯರಿಂಗ್​ ಆಕಾಂಕ್ಷಿಗಳಿಗೆ ಸಿಹಿ, ವೈದ್ಯ ಆಕಾಂಕ್ಷಿಗಳಿಗೆ ಕಹಿ ಸುದ್ದಿ ನೀಡಿದ ಸರ್ಕಾರ!

Medical Education
Published on

ಬೆಂಗಳೂರು 2023-24ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಕೋರ್ಸ್‌ಗೆ ಶೇ.7 ಮತ್ತು ಖಾಸಗಿ ವೈದ್ಯ ಕಾಲೇಜುಗಳ ಶುಲ್ಕವನ್ನು ಶೇ.10 ಹೆಚ್ಚಳ ಮಾಡಿದೆ.

ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಹಿಂದಿನ ಸರ್ಕಾರವು ಶೇ.10 ಶುಲ್ಕವನ್ನು ಹೆಚ್ಚಳ ಮಾಡಿತ್ತು. ಅದನ್ನು ನೂತನ ಸರ್ಕಾರವು ಶೇ.3 ಶುಲ್ಕವನ್ನು ಕಡಿತಗೊಳಿಸಿದೆ. ಶೇ.7 ಶುಲ್ಕ ಹೆಚ್ಚಳ ಮಾಡಿದೆ.

ಇಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ಕಡಿಮೆ ಮಾಡುವ ಉದ್ದೇಶದಿಮದ ಇಳಿಕೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. ಸೀಟು ಆಕಾಂಕ್ಷಿಗಳಿಗೆ ಕೊಂಚ ಶುಲ್ಕದ ಹೊರೆ ಕಡಿಮೆಯಾದಂತಾಗಿದೆ.

ಇನ್ನು ವೈದ್ಯಕೀಯ ಕೋರ್ಸ್‌ಗಳಿಗೆ ಹಿಂದಿನ ವರ್ಷ (2022-23)ದಲ್ಲಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಶೇ.10 ಶುಲ್ಕವನ್ನು ಹೆಚ್ಚಳ ಮಾಡಿ, ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಈ ವರ್ಷ ಅದನ್ನು ಸರಿದೂಗಿಸುವ ಉದ್ದೇಶದಿಂದ ಖಾಸಗಿ ಕಾಲೇಜುಗಳಿಗೆ ಶೇ.10 ಶುಲ್ಕ ಹೆಚ್ಚಳ ಮಾಡಿದೆ. ಅಲ್ಪಸಂಖ್ಯಾತ ಕಾಲೇಜುಗಳಿಗೆ ಶುಲ್ಕ ಹೆಚ್ಚಳ ಮಾಡಿಲ್ಲ.

11,595 ಸೀಟುಗಳು ಲಭ್ಯ:

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ 68 ಕಾಲೇಜುಗಳಿಂದ 11,595 ಸೀಟುಗಳು ಲಭ್ಯವಾಗಲಿವೆ. ಅಖಿಲ ಭಾರತ ಕೋಟಾ-2,934, ಇಎಸ್‌ಐ-139, ಸರ್ಕಾರಿ ಕೋಟಾ-4,982, ಖಾಸಗಿ ಕೋಟಾ- 2,512, ಎನ್‌ಆರ್‌ಐ- 767 ಮತ್ತು ಮ್ಯಾನೇಜ್‌ಮೆಂಟ್- 261 ಸೀಟುಗಳು ಲಭ್ಯವಾಗಲಿವೆ. ಕೆಇಎ ಕೌನ್ಸೆಲಿಂಗ್‌ನಲ್ಲಿ 8,522 ಸಿಟುಗಳು ದೊರೆಯಲಿವೆ ಎಂದು ವೈದ್ಯಕೀಯ ನಿರ್ದೇಶನಾಲಯ ಮಾಹಿತಿ ನೀಡಿದೆ.

ಇಂಜಿನಿಯರಿಂಗ್ ಶುಲ್ಕ (2022-23)

ಸರ್ಕಾರಿ ಕಾಲೇಜುಗಳಲ್ಲಿ 37,191 ರೂ., ಅನುದಾನಿತ ಕಾಲೇಜುಗಳಲ್ಲಿ 48,191, ಖಾಸಗಿ ಟೈಪ್-1 91,878 ರೂ., ಖಾಸಗಿ ಟೈಪ್-2 99,066. ಕಾಮೆಡ್-ಕೆ- ಟೈಪ್ 1- 1,58,123 ರೂ. ಮತ್ತು ಟೈಪ್ 2- 2,22,156 ರೂ.ಗಳಿದೆ. ಈ ಶುಲ್ಕಗಳಿಗೆ ಶೇ.7 ಹೆಚ್ಚಳವಾಗಲಿದೆ.

ವೈದ್ಯಕೀಯ ಶುಲ್ಕ (2023-24) 

ಸರ್ಕಾರಿ ಕಾಲೇಜು 59,800

ಖಾಸಗಿ ವೈದ್ಯಕೀಯ ಕಾಲೇಜುಗಳು

ಸರ್ಕಾರಿ ಕೋಟಾ ಖಾಸಗಿ 1,28,746 ರೂ. 10,80,152 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net