ಓದು ಬರಹಕ್ಕೆ ಒತ್ತು ನೀಡಿದರೆ ಯಶಸ್ಸು ಸಾಧ್ಯ; ಪ್ರಕಾಶಾನಂದಜಿ ಮಹಾರಾಜ್

20-RNR-05
Published on

ರಾಣೆಬೆನ್ನೂರ: ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ ಸಮಯದ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬೇಕು ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇದೀಗ ಹಚ್ಚಿದ ಈ ಜ್ಯೋತಿ ನಿಮ್ಮ ಜ್ಞಾನದ ಬೆಳಕನ್ನು ಪಸರಿಸುವಂಥದು. ಅಷ್ಟ ದಿಕ್ಕುಗಳಲ್ಲಿ ಬೆಳಕನ್ನು ಬೀರಿದಂತೆ ನಿಮ್ಮ ಪ್ರತಿಭೆ ಬೆಳಗಲಿ ಎಂದರು.
ಪ್ರಾಚಾರ್ಯ ಡಾ. ಶಿವಕುಮಾರ ಬಿ. ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿಕ್ ಡೀನ್ ಡಾ. ಎಸ್.ಎಫ್. ಕೊಡದ, ವಿಭಾಗದ ಮುಖ್ಯಸ್ಥ ಸಿ.ಎಂ. ಪರಮೇಶ್ವರಪ್ಪ, ಡಾ. ಎಸ್.ಜಿ. ಮಾಕನೂರು, ಡಾ. ಬಿ. ಮಹೇಶ್ವರಪ್ಪ , ಡಾ. ಜೆ.ಒ. ಕಿರಣ, ಡಾ. ಡಿ.ಎಸ್. ವಿಶ್ವನಾಥ, ಶ್ರೀನಿಧಿ ಬಳಿಗಾರ, ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ಎಸ್.ಪಿ. ಭಾವನಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net