ಷೇರು ಮಾರುಕಟ್ಟೆಯಲ್ಲಿ ನಷ್ಟ; ಸಾಲಬಾಧೆಯಿಂದ ಇಂಜಿನಿಯರ್ ಆತ್ಮಹತ್ಯೆ| Engineer suicide

ವಿಜಯವಾಣಿ - 2025-11-01T081911.623
Published on

ಹರಿದ್ವಾರ: ಉತ್ತರಾಖಂಡದ ಅರಿಹಂತ್ ವಿಹಾರ್ ಪ್ರದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡು, ಸಾಲಭಾದೆಯಿಂದ ಇಂಜಿನಿಯರ್(Engineer suicide) ಒಬ್ಬರು ಡೆತ್​ನೋಟ್​ ಬರೆದಿಟ್ಟು ಹೊಗೆ ತುಂಬಿದ ಕೋಣೆಯಲ್ಲಿ ಬೀಗ ಹಾಕಿಕೊಂಡು ಉಸಿರುಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ(ನ. 07) ವರದಿಯಾಗಿದೆ.

ಲವಕುಮಾರ್ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್. ಆರ್ಥಿಕ ಸಂಕಷ್ಟ, ಆಸ್ತಿ ವಿವಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್​ನೋಟ್ ಬರೆದು, ಪತ್ನಿ ವಾಟ್ಸಾಪ್​ಗೆ ಮೆಸೇಜೆ ಹಾಕಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಕಂಖಾಲ್ ಠಾಣೆ ಹಿರಿಯ ಸಬ್​ ಇನ್ಸ್​ಪೆಕ್ಟರ್ ಸತ್ಯೇಂದ್ರ ಭಂಡಾರಿ, ಅರಿಹಂತ್ ವಿಹಾರ್ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ಆರ್ಥಿಕ ಸಂಕಷ್ಟ ಮತ್ತು ಆಸ್ತಿ ವಿವಾದದಿಂದಾಗಿ ಲವ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದಿದ್ದ ಕೊಠಡಿಯಿಂದ ಒಂದು ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ವೃತ್ತಿಯಲ್ಲಿ ರಾಸಾಯನಿಕ ಎಂಜಿನಿಯರ್ ಆಗಿದ್ದ ಲವ್ ಕುಮಾರ್, ತನ್ನ ಕೋಣೆಯಲ್ಲಿ ಹೀಟರ್ ಮೇಲೆ ಕಲ್ಲಿದ್ದಲು ಸುಟ್ಟು ಹೊಗೆ ಸೃಷ್ಟಿಸಿ ಒಳಗೆ ಹೋಗಿ ಬೀಗ ಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.  ಇದಕ್ಕೂ ಮುನ್ನ ತಮ್ಮ ಪತ್ನಿಗೆ ವಾಟ್ಸಾಪ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಷೇರು ಮಾರುಕಟ್ಟೆಯಲ್ಲಿನ ನಷ್ಟದಿಂದ ತೀವ್ರವಾಗಿ ನೊಂದಿದ್ದರು. ಮದ್ಯಪಾನ ವ್ಯಸನಿಯಾಗಿದ್ದರು. ಈ ಅಭ್ಯಾಸದಿಂದ ಬೇಸತ್ತ ಅವರ ಪತ್ನಿ ತನ್ನ ಮಕ್ಕಳೊಂದಿಗೆ ಹೆತ್ತವರ ಮನೆಗೆ ಹೋಗಿದ್ದರು.

ಕುಮಾರ್ ಅವರ ವಾಟ್ಸಾಪ್ ಸಂದೇಶವನ್ನು ನೋಡಿದ ನಂತರ, ಅವರ ಪತ್ನಿ ಪದೇ ಪದೇ ಆತನಿಗೆ ಕರೆ ಮಾಡಿದ್ದಾಳೆ. ಆದರೆ ಅವರು ಫೋನ್​ ಕರೆ ಸ್ವೀಕರಿಸದಿದ್ದಾಗ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಪೊಲೀಸರನ್ನು ಕರೆಯಿಸಿ ಮನೆಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿದಾಗ  ಕೋಣೆ ಹೊಗೆಯಿಂದ ತುಂಬಿಕೊಂಡಿದ್ದು, ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net