ಹೈಕೋರ್ಟ್​ ಆದೇಶದ ಬೆನ್ನಲ್ಲೇ ಕೇಂದ್ರ ಸಚಿವ ಎಚ್​ಡಿಕೆ ಬಿಡದಿ ತೋಟದ ಮನೆ ಸುತ್ತ ಒತ್ತುವರಿ ತೆರವು | Encroachments

dk-2025-03-18t143236882-67d936bc237f5
Published on

Encroachments: ರಾಮನಗರ(ಬಿಡದಿ) : ಕೇಂದ್ರ ಸಚಿವ ಎಚ್​ಡಿಕೆ ಸೇರಿದಂತೆ ಇತರ ಪ್ರಭಾವಿಗಳು ಸೇರಿ ಒತ್ತುವರಿ ಮಾಡಿರುವ 14 ಎಕರೆ ಜಾಗವನ್ನು ಹೈಕೋರ್ಟ್​ ಆದೇಶದ ಬೆನ್ನಲ್ಲೇ ಮಂಗಳವಾರ(ಮಾ.18) ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಚರಣೆ ನಡೆಯುತ್ತಿದೆ.

ಪ್ರಕರಣ ಸಂಬಂಧ ಕಂದಾಯ ಇಲಾಖೆ ಬಿಡದಿಯ ಕೇತಗಾನಹಳ್ಳಿ ಸರ್ವೇ ನಂ 7,8,9,10,16,17 ಮತ್ತು 79ರಲ್ಲಿ ಸರ್ವೇ ನಡೆಸಿದ್ದು, ಜಾಗ ಒತ್ತುವರಿ ಬಗ್ಗೆ ವರದಿ ಮಾಡಿತ್ತು.

ಇನ್ನು ತೆರವು ಸ್ಥಳಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್,  ಎಸ್ಪಿ ಸುರೇಶ್, ಎಎಸ್ಪಿ ರಾಮಚಂದ್ರಯ್ಯ ಬಂದಿದ್ದಾರೆ.

ಈ ಕುರಿತು ಡಿಸಿ ಯಶವಂತ್ ವಿ ಗುರುಕರ್ ಮಾತನಾಡಿದ್ದು, ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ಮಾಡ್ತಿದ್ದೇವೆ. 14ಕ್ಕೂ ಹೆಚ್ಚು ಎಕರೆ ಕುಮಾರಸ್ವಾಮಿ ಸೇರಿ ಇತರರಿಂದ ಒತ್ತುವರಿ ಆಗಿದೆ. 10 ಕ್ಕೂ ಹೆಚ್ಚು ಸರ್ವೇ ನಂಬರ್ ಗಳನ್ನ ಪರಿಶೀಲನೆ ಮಾಡಿದ್ದೇವೆ. ಒತ್ತುವರಿ ತೆರವು ಮಾಡಿ ಕೋರ್ಟ್ ಗೆ ವರದಿ ಕೊಡುತ್ತೇವೆ ಎಂದರು.

ಕುಮಾರಸ್ವಾಮಿ ಹೇಳೊದೇನು..?

ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಭೂ ದಾಖಲೆಗಳ ಇಲಾಖೆಗೆ ಹೆಚ್ಡಿಕೆ ಬರೆದಿರುವ ಪತ್ರ ಲಭ್ಯವಾಗಿದೆ. ಕಾನೂನು ಬಾಹಿರವಾಗಿ ನನ್ನನ್ನಲ್ಲಿ ಹೆಚ್ಚುವರಿ ಜಮೀನು ಇದ್ರೆ ವಶಪಡಿಸಿಕೊಳ್ಳಬಹುದು. ಬಿಡದಿಯ ಕೇತಗಾನಹಳ್ಳಿ ಸರ್ವೇ ನಂ 7ರಲ್ಲಿ ನನ್ನ ಜಮೀನು ಇದೆ. ಇದರಲ್ಲಿ ಕಳೆದು ಹೋಗಿರುವ ಜಮೀನನ್ನೂ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಸರ್ವೇ 7ರಲ್ಲಿ 5 ಎಕರೆ 20ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ತಾವು ಗುರುತಿಸಿಕೊಡುಂತೆ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಎಚ್​​ಡಿಕೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net