ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡಿ: ಡಿ.ಎಸ್.ಅರುಣ್

sihimogge sambhrama
ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಿಹಿಮೊಗ್ಗೆ ಸಂಭ್ರಮವನ್ನು ಎಂಎಲ್‌ಸಿ ಡಿ.ಎಸ್.ಅರುಣ್ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಡಾ. ಎ.ಸಿ.ಶೈಲಜಾ, ಡಾ. ಕೆ.ಎ.ವಿಷ್ಣುಮೂರ್ತಿ, ಜಗದೀಶ್ ಇದ್ದರು.
Published on

ಶಿವಮೊಗ್ಗ: ಅಳಿವಿನಂಚಿನಲ್ಲಿ ಇರುವ ಜನಪದ ಕಲೆಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.

ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಅನವರತ ಅರ್ಪಿಸುವ ಸಿಹಿಮೊಗ್ಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಹೋದಾಗ ಜನಪದ ಕಲೆಗಳನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.

ಪ್ರತಿ ವಿದ್ಯಾರ್ಥಿಗೂ ಒಳ್ಳೆಯ ವಿಷಯಗಳ ಕುರಿತು ಹೊಸ ಹೊಸ ಚಿಂತನೆಗಳು ಮೂಡಬೇಕು. ಒಟ್ಟು ವ್ಯವಸ್ಥೆಯಲ್ಲಿ ಒಂದೇ ತರಹದ ಕೆಲಸಕ್ಕೆ ಆದ್ಯತೆ ನೀಡದೆ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಶಾಸಕ, ಅನವರತ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ, ಕಾಲೇಜು ಶಿಕ್ಷಣದ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ, ರಂಗಾಯಣ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ, ಅನವರತ ಅಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು. ಜನಪದ ನೃತ್ಯ ಸ್ಪರ್ಧೆಗೆ 16 ತಂಡಗಳು, ಗಾಯನ ಸ್ಪರ್ಧೆಗೆ 18 ತಂಡಗಳು, ಚಿತ್ರಕಲೆ ಸ್ಪರ್ಧೆಗೆ ವೈಯಕ್ತಿಕವಾಗಿ 45 ಮಂದಿ, ಛಾಯಾಗ್ರಹಣ ಸ್ಪರ್ಧೆಗೆ ವೈಯಕ್ತಿಕವಾಗಿ 21 ಮಂದಿ ಸೇರಿ ಒಟ್ಟು 331 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net