

ಎನ್.ಆರ್.ಪುರ: ಕ್ರೀಡೆಯಲ್ಲಿ ಮಕ್ಕಳು ಆಸಕ್ತಿ ತೊರಬೇಕಾದರೆ ಹೊಸತನ, ಉತ್ತೇಜನ ನೀಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಪಿ.ಜೆ.ಅಂಟೋನಿ ಹೇಳಿದರು.
ತಾಲೂಕಿನ ಯಡದಾಳ್ ರಸ್ತೆಯಲ್ಲಿ ಗುರುವಾರ ಸಹ್ಯಾದ್ರಿ ಸ್ಟೋಟ್ಸ್ ಕ್ಲಬ್‌ನಿಂದ ನೂತನವಾಗಿ ನಿರ್ಮಿಸಿರುವ ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಓಣಂ ಹಬ್ಬದಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ದಸರಾ ಹಬ್ಬದಂತೆ ಕೇರಳದಲ್ಲಿ ಓಣಂ ಅನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದರ ಅಂಗವಾಗಿ ಸಂಕೇತಿಕವಾಗಿ ಮಲಯಾಳಿ ಸಮಾಜದ ನಾವು ಸಹ ವಿನೂತನವಾಗಿ ಆಚರಿಸುತ್ತಿದ್ದೇವೆ. ಇದೇ ಸಂಭ್ರಮದಲ್ಲಿ ಷಟಲ್ ಕೋರ್ಟ್ ನಿರ್ಮಿಸಿದ್ದೇವೆ. ಪ್ರತಿಯೊಬ್ಬರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕ್ರೈಸ್ತ ಸಮುದಾಯದ ಮುಖಂಡ ಎಂ.ಪಿ.ಸನ್ನಿ ಮಾತನಾಡಿ, ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ನಾವು ಸಹ ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಹೋಗಿ ಬರುತ್ತಿದ್ದೆವು. ನಾವು ಗ್ರಾಮೀಣ ಭಾಗದ ಮೈದಾನಗಳಲ್ಲಿ ಅಟವಾಡಿಕೊಂಡು ಗೆದ್ದು ಜಿಲ್ಲಾ ಮಟ್ಟಕ್ಕೆ ಹೋದರೆ ಅಲ್ಲಿ ಮೈದಾನಗಳ ವ್ಯವಸ್ಥೆ ನೋಡಿ ನಿಬ್ಬೆರಗಾಗಿ ಸೋತು ಬರುತ್ತಿದ್ದೆವು. ಅಲ್ಲಿ ಸಿಂಥೆಟಿಕ್, ಉಡನ್ ಕೋರ್ಟ್‌ಗಳು ಇರುತ್ತಿದ್ದವು. ಈ ರೀತಿಯ ಸಮಸ್ಯೆ ನಮ್ಮ ಮುಂದಿನ ಪೀಳಿಗೆಗೆ ಆಗಬಾರದು ಎಂಬ ಉದ್ದೇಶದಿಂದ ಶ್ರಮ ಹಾಕಿ ಷಟಲ್ ಕೋರ್ಟ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕೋರ್ಟ್ ನಿರ್ಮಾಣಕ್ಕಾಗಿ ಶ್ರಮಿಸಿದ ಗೋವರ್ಧನ್ ಸೇರಿ 10 ಜನರನ್ನು ಸನ್ಮಾನಿಸಲಾಯಿತು. ಸಹ್ಯಾದ್ರಿ ಸ್ಟೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿನು ವರ್ಗೀಸ್, ಹಿರಿಯ ಕ್ರೀಡಾಪಟು ಸಜಿ ಡಿ. ಪೆರಿಮಾಳ್, ಲಿಟ್ಲ್ ್ಲವರ್ ಸ್ಟೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಅಂಬಾಟಿ ಎಲಿಯಾಸ್, ಯುವ ಪ್ರತಿಭೆ ಅಜೇಶ್, ಕೆ.ಜಿ.ಪೌಳಿ, ಪೌಳಿ ಮೈಥಾನ್, ಶಮ್ನಾ ಇತರರಿದ್ದರು.