ಕಾಫಿ ಕಪ್​​ ಹಿಡಿದು ಬಿಕಿನಿಯಲ್ಲೇ ರಸ್ತೆಗಿಳಿದ ಮಾಡೆಲ್; ಪಡ್ಡೆ ಹುಡುಗರು ಫಿದಾ

Emily
Published on

ನ್ಯೂಯಾರ್ಕ್: ಮಾಡೆಲ್ ಒಬ್ಬಳು ಬಿಕಿನಿ ಧರಿಸಿ ರಸ್ತೆಯಲ್ಲಿ ಕಾಫಿ ಕುಡಿಯುತ್ತಾ ತೆರಳಿದ್ದಾಳೆ. ಈಕೆ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರೆಹೆವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಮಾಡೆಲ್ ಎಮಿಲಿ ರತಾಜ್‌ಕೋವಸ್ಕಿ ಕೋಲ್ಡ್ ಕಾಫಿ ಕುಡಿಯುತ್ತಾ ನ್ಯೂಯಾರ್ಕ್ ರಸ್ತೆಯಲ್ಲಿ ಸಾಗಿದ್ದಾಳೆ. ಪ್ರಮುಖ ರಸ್ತೆಯಲ್ಲಿ ಆರಾಮಾಗಿ ತೆರಳಿದ ಮಾಡೆಲ್ ಫೋಟೋಗಳು ಎಲ್ಲೆಡೆ ವರೈಲ್ ಆಗಿದೆ. ರೆಡ್, ಆರೇಂಜ್ ಹಾಗೂ ಬಿಳಿ ಬಣ್ಣ ಮಿಶ್ರಿತ ಬಿಕಿನಿಯಲ್ಲಿ  ರಸ್ತೆಯಲ್ಲಿ ಸಾಗಿದ್ದಾಳೆ.  32 ವರ್ಷದ ಎಮಿಲಿ ರಸ್ತೆಯಲ್ಲಿ ಬಿಕಿನಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ರೀತಿ  ಬಿಕಿನಿ ಹಾಕಿ ರಸ್ತೆಯಲ್ಲಿ ನಡೆದರೆ ಟ್ರಾಫಿ ಜಾಮ್ ಖಂಡಿತ, ಹುಡುಗರ ಹಾರ್ಟ್​​ ತುಂಬಾ ವೀಕ್​​ ಹೀಗೆ ಮಾಡಿದ್ರೆ ಹೇಗೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.  ಆದರೆ ಈಕೆ ಹೀಗೆ ವಿಭಿನ್ನವಾಗಿ ಫೋಟೋಶೂಟ್​​ ಮಾಡಿಸಲು ಯಾವುದಾದರೂ ಜಾಹೀರಾತ ಅಥವಾ ಫೋಟೋಶೂಟ್​​ ಎನ್ನುವುದು  ತಿಳಿದುಬಂದಿಲ್ಲ.

ಎಮಿಲಿ ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ಮಾಡೆಲ್. 2017ರಿಂದ ಈಕೆ ಬಿಕಿನಿ ಮೂಲಕವೇ ಬಾರಿ ಜನಪ್ರಿಯತೆ ಗಳಿಸಿದ್ದಾರೆ.  ಎಮಿಲಿ ಬಿಕಿನಿಯಲ್ಲಿ ಮಾತ್ರವಲ್ಲ, ಟಾಪ್‌ಲೆಸ್ ಮೂಲಕವೂ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕವೇ ಎಮಿಲಿ ಅತ್ಯಂತ ಜನಪ್ರಿಯವಾಗಿದ್ದಾರೆ. ಮಾಡೆಲಿಂಗ್ ಮೂಲಕ ಭರ್ಜರಿ ಆದಾಯಗಳಿಸುತ್ತಿರುವ ಎಮಿಲಿ ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಒಳ ಉಡುಪಗಳ ಜಾಹೀರಾತುಗಳಲ್ಲಿ ಎಮಿಲಿ ಜನಪ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net