'ಎಮರ್ಜೆನ್ಸಿ' ಯಲ್ಲಿ ಇಂದಿರಾ ಹತ್ಯೆ ತೋರಿಸದಂತೆ ಒತ್ತಡ: ಕಂಗನಾ ಸೆನ್ಸೇಷನಲ್​ ಹೇಳಿಕೆ

kangana (1)
Published on

ಮುಂಬೈ: ಬೆದರಿಕೆಗಳಿಂದಾಗಿ 'ಎಮರ್ಜೆನ್ಸಿ' ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ನಟಿ ಕಂಗನಾ ರನೌತ್ ತಿಳಿಸಿದರು.

ಕಂಗನಾ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ, ತನಗೆ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಸದಸ್ಯರಿಗೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ತನ್ನ ಭದ್ರತಾ ಸಿಬ್ಬಂದಿಯಿಂದಲೇ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಗಿದ್ದು, ಈ ದೃಶ್ಯವನ್ನು ತೋರಿಸದಂತೆ ತನ್ನ ಮೇಲೆ ಒತ್ತಡವಿದೆ ಎಂದು ಅವರು ಹೇಳಿದರು.

'ಎಮರ್ಜೆನ್ಸಿ' ಚಿತ್ರದಲ್ಲಿ ಇಂದಿರಾ ಗಾಂಧಿ ಹತ್ಯೆ, ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಪಂಜಾಬ್ ಗಲಭೆಗಳನ್ನು ತೋರಿಸದಂತೆ ನಮ್ಮ ಮೇಲೆ ಸೆನ್ಸಾರ್​ ಮಂಡಳಿಯಿಂದಲೂ ಒತ್ತಡವಿದೆ. ನಾವು ಸತ್ಯವನ್ನು ಮರೆಮಾಚಿ ಇನ್ನೇನನ್ನು ತೋರಿಸಬೇಕು? ಇದು ನನಗೆ ನಂಬಲಾಗದ ಸಮಯವಾಗಿದೆ. ಈ ದೇಶದಲ್ಲಿನ ಈ ಸ್ಥಿತಿಗೆ ನಾನು ತುಂಬಾ ವಿಷಾದಿಸುತ್ತೇನೆ ಎಂದು ಅವರು ಹೇಳಿದರು.

ಶಿರೋಮಣಿ ಅಕಾಲಿ ದಳ ಶುಕ್ರವಾರ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ಎಮರ್ಜೆನ್ಸಿ ಚಿತ್ರವು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಮತ್ತು ತಪ್ಪು ಮಾಹಿತಿ ಹರಡಬಹುದು ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿದೆ. ಚಿತ್ರದ ಟ್ರೇಲರ್ ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುವುದು ಮಾತ್ರವಲ್ಲದೆ ದ್ವೇಷ ಮತ್ತು ಸಾಮಾಜಿಕ ಅಪಶ್ರುತಿಯನ್ನು ಉತ್ತೇಜಿಸುವ ತಪ್ಪಾದ ಐತಿಹಾಸಿಕ ಸತ್ಯಗಳನ್ನು ಬಿಂಬಿಸುತ್ತದೆ ಎಂದು ಅದು ಆರೋಪಿಸಿದೆ ಎಂದು ಕಂಗನಾ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net