ಕಮ್ಯುನಿಸ್ಟರಿಗೆ ಇರುವ ಸ್ವಾತಂತ್ರ್ಯ ನಮಗಿಲ್ಲ; ಬಿಟೌನ್​​ ಕ್ವೀನ್​ ಹೀಗೆಳಿದ್ದೇಕೆ

Untitled-design-32-1
Published on

ಮುಂಬೈ: ಬಿಟೌನ್​ ಕ್ವೀನ್​​ ಕಂಗನಾ ರಣಾವತ್​​ ಅಭಿನಯದ ಸಿನಿಮಾ ಎಮರ್ಜೆನ್ಸಿ ಸೆಪ್ಟೆಂಬರ್​ 6ರಂದು ರಿಲೀಸ್​ ಆಗಬೇಕಿತ್ತು. ಆದರೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಗ್ರೀನ್​​​ ಸಿಗ್ನಲ್​​ ಸಿಗದ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್​​, ದೇಶದ ಕಾನೂನು ಎಂದರೆ ಯಾವುದೇ ಪರಿಣಾಮ ಅಥವಾ ಸೆನ್ಸಾರ್‌ಶಿಪ್ ಇಲ್ಲದೆ ಓಟಿಟಿ ವೇದಿಕೆಯಲ್ಲಿ ಯಾರೂ ಊಹಿಸಲಾಗದಷ್ಟು ಹಿಂಸೆ ಮತ್ತು ನಗ್ನತೆಯನ್ನು ತೋರಿಸಬಹುದು. ಯಾರಾದರೂ ತಮ್ಮ ರಾಜಕೀಯ ಪ್ರೇರಿತ ದುಷ್ಟ ಉದ್ದೇಶಗಳಿಗೆ ಸರಿಹೊಂದುವಂತೆ ನಿಜ ಜೀವನದ ಘಟನೆಗಳನ್ನು ತಿರುಚಬಹುದು. ಪ್ರಪಂಚದಾದ್ಯಂತ ಇಂತಹ ಎಡಪಂಥೀಯ ಅಥವಾ ದೇಶವಿರೋಧಿ ಅಭಿವ್ಯಕ್ತಿಗೆ ಮತ್ತು ಕಮ್ಯುನಿಸ್ಟರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.

ಆದರೆ ರಾಷ್ಟ್ರೀಯತಾವಾದಿಯಾಗಿ ಯಾವುದೇ ಓಟಿಟಿ ವೇದಿಕೆಯು ಭಾರತದ ಸಮಗ್ರತೆ ಮತ್ತು ಏಕತೆಯ ಸುತ್ತ ಸುತ್ತುವ ಚಲನಚಿತ್ರಗಳನ್ನು ವೀಕ್ಷಿಸಲು ನಮಗೆ ಅನುಮತಿಸುವುದಿಲ್ಲ. ಈ ದೇಶಕ್ಕೆ ಸಂಬಂಧಿಸಿದ ಕೆಲವೊಂದು ತುಣುಕುಗಳನ್ನು ತೋರಿಸುವ ಮತ್ತು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ ಸಿನಿಮಾಗಳನ್ನು ಮಾಡುವ ನಮ್ಮಲ್ಲಿ ಕೆಲವರಿಗೆ ಮಾತ್ರ ಸೆನ್ಸಾರ್‌ಶಿಪ್ ಇದೆ ಎಂದು ತೋರುತ್ತದೆ. ಇದು ಅತ್ಯಂತ ನಿರಾಶಾದಾಯಕ ಮತ್ತು ಅನ್ಯಾಯ ಎಂದು ಹೇಳಿದರು.

1999ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಘಟನೆಯನ್ನು ಆಧರಿಸಿದ ಚಲನಚಿತ್ರವಾದ 'IC 814 - ದಿ ಕಂದಹಾರ್ ಹೈಜಾಕ್' ಅನ್ನು ಟೀಕಿಸಿದ ಅಮಿತ್ ಮಾಳವಿಯಾ ಅವರ ಪೋಸ್ಟ್‌ಗೆ ನಟಿ ಕಂಗನಾ ರಣಾವತ್​​ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಂಗನಾ ರಣಾವತ್​​ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್​ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net