ಅಭಿಮಾನಿಗಳಿಗೆ ಎಚ್ಚರದಿಂದಿರಲು ಟಾಲಿವುಡ್​ ಮೆಗಾಸ್ಟಾರ್ ಸೂಚನೆ​​​; ನಟ ಚಿರಂಜೀವಿ ಹೀಗೆಳಿದ್ದೇಕೆ?

Untitled-design-28
Published on

ಹೈದರಾಬಾದ್​​: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದಾಗಿ ತೆಲಂಗಾಣ ಮತ್ತು ಆಂಧ್ರದಲ್ಲಿ ಭಾರೀ ಮಳೆಯಾಗುತ್ತಿರುವುದು ಗೊತ್ತೆ ಇದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅತಿ ಹೆಚ್ಚು ಮಳೆಯಾಗುವ ಸಂಭವವಿರುವುದರಿಂದ ಹೈದರಾಬಾದ್‌ನಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಈ ಬಗ್ಗೆ ಟಾಲಿವುಡ್​​ ಮೆಗಾಸ್ಟಾರ್​ ಚಿರಂಜೀವಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತೆಲುಗು ರಾಜ್ಯಗಳಲ್ಲಿ ಪ್ರವಾಹದ ಪರಿಣಾಮ ತುಂಬಾ ಹೆಚ್ಚಾಗಿದೆ. ಹಲವು ಗ್ರಾಮಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತವಾಗಿವೆ. ಇಂತಹ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ನಿಮ್ಮ ಕುಟುಂಬ ಸದಸ್ಯನಾಗಿ ನನ್ನದೊಂದು ಮನವಿ. ಏನಾದರೂ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ.ಇಲ್ಲದಿದ್ದರ ಮನೆಯಿಂದ ಹೊರಗೆ ಬರಬೇಡಿ. ವೈರಲ್​ ಜ್ವರದ ಅಪಾಯವಿರುವುದರಿಂದ ಮಕ್ಕಳು ಸೇರಿದಂತೆ ಎಲ್ಲರೂ ಜಾಗರೂಕರಾಗಿರಬೇಕು. ಇಂತಹ ಅನಾಹುತಗಳು ಎದುರಾದಾಗ ನನ್ನ ಅಭಿಮಾನಿಗಳು ಸದಾ ಬೆಂಬಲ್ಕೆ ಇರುತ್ತಾರೆ. ಈಗಲೂ ಅಭಿಮಾನಿಗಳು ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಸೈಕ್ಲೋನ್​​ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರಾಜ್ಯದ 9 ಜೆಲ್ಲಗಳಲ್ಲಿ ರೆಡ್​ ಅಲರ್ಟ್​​, ಹದಿಮೂರು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​ ಹಾಗೂ ಹನ್ನೊಂದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ. ಅಲ್ಲದೆ ಕರಾವಳಿಯಲ್ಲಿರುವವರು ಜಾಗೂರಕರಾಗಿರುವಂತೆ ಸೂಚಿಸಿದೆ. ಪ್ರಸ್ತುತ ಹೈದರಾಬಾದ್​ ಮತ್ತು ವಿಜಯವಾಡದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡಗಳು ಬೀಡುಬಿಟ್ಟಿವೆ. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣದಿಂದಲೇ ತಮ್ಮ ಕಾರ್ಯವನ್ನು ಆರಂಭಿಸುತ್ತಾರೆ. ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳ ಕಚೇರಿ, ಹೈದರಾಬಾದ್​ ಮುನ್ಸಿಪ್​ ಕಾರ್ಪೊರೇಷನ್​​​(ಜಿಎಚ್​​ಎಂಸಿ) ಮತ್ತು ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ರಾಜ್ಯಸರ್ಕಾರ ಸೂಚನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net