

ಚಿತ್ರದುರ್ಗ: ಕಲ್ಯಾಣ ಕರ್ನಾಟಕ ಸಂಘಟನಾ ಸೇನೆ ಹೋರಾಟದ ಲಾಂಛನ ಮತ್ತು ಭಾವುಟ ಲೋಕಾರ್ಪಣೆ ಕಾರ‌್ಯಕ್ರಮವನ್ನು ಜ.27ರಂದು ಸಂ ಜೆ 6 ಗಂಟೆಗೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಲಾಗಿದೆ ಎಂದು ಸೇನೆ ಅಧ್ಯಕ್ಷ ಎ.ಎಂ.ಮರುಳಾರಾಧ್ಯ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸವಲತ್ತು ಹಾಗೂ ಪೂರಕ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪಟ್ಟಿಗೆ ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳು ಹಾಗೂ ದಾವಣಗೆರೆ ಜಿಲ್ಲೆ ಜಗಳೂರ ತಾಲೂಕನ್ನು ಸೇರಿಸ ಬೇಕೆಂಬ ಕೇಂದ್ರ,ರಾಜ್ಯಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸಲಾಗುವುದು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಕಾರ‌್ಯಕ್ರಮ ಉದ್ಘಾಟಿಸುವರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಲಾಂಛನ ಬಿಡುಗಡೆ ಮಾಡುವರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಭಾವುಟ ಅನಾವರಣ ಮಾಡಲಿದ್ದಾರೆ.
ಗಣ್ಯರಾದ ಬಿ.ಎ.ಲಿಂಗಾರೆಡ್ಡಿ,ಸಾಜೀಜಾರ್ಜ್, ಕೆ.ಎಂ.ವಿರೇಶ್ ಅವರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಲಾಂಛನ ವಿನ್ಯಾಸ ಮಾಡಿರುವ ಆರ್ಟ್ ಕಿಂಗ್ ಅಲಿ ಹಾಗೂ ಕಲ್ಯಾಣ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಅವರನ್ನು ಸನ್ಮಾನಿಸಲಾ ಗುವುದು ಎಂದರು.
ಸಂಘಟನೆ ಉಪಾಧ್ಯಕ್ಷ ಕೆ.ಎನ್.ಜಡೇಶ್,ಎಂ.ಗುರುಸ್ವಾಮಿ,ಟಿ.ಎಲ್.ಮಂಜುನಾಥ್,ಎಂ.ದೇವರಾಜ,ಆರ್.ಪ್ರಕಾಶ್,ಎಲ್. ಬಸವ ರಾಜ್,ಟಿ.ಜಯಪ್ರಕಾಶ್,ಅಜ್ಗರ್‌ಬಾಷ,ನೂರುಲ್ಲಾ,ವಿ.ತಿಪ್ಪೇಸ್ವಾಮಿ,ಬಿ.ಎನ್.ಅರುಣ್ ಕುಮಾರ್,ಸೋಲೋಮನ್ ಜೆ.ರಾಜು ಹಾಗೂ ಡಿ.ಮಧುಕುಮಾರ್ ಇದ್ದರು.
--