ವೇಗವಾಗಿ ಇಳಿಯುತ್ತಿರುವ ಎಲಾನ್ ಮಸ್ಕ್ ಸಂಪತ್ತು!

ವಿಜಯವಾಣಿ (6)
Published on

ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಅವರ ಒಟ್ಟು ಆಸ್ತಿ ಕಳೆದ ಕೆಲವೇ ವಾರಗಳಲ್ಲಿ ಸುಮಾರು 120 ಶತಕೋಟಿ ಡಾಲರ್​ನಷ್ಟು ಕಡಿಮೆಯಾಗಿದೆ. 2025ರ ಆರಂಭದಿಂದ ಈವರೆಗೆ ಅವರ ಸಂಪತ್ತು ಶೇ. 25ರಷ್ಟು ಇಳಿಕೆಯಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. 330 ಶತಕೋಟಿ ಡಾಲರ್ ಒಟ್ಟು ಸಂಪತ್ತಿನೊಂದಿಗೆ ಅವರು ಈಗಲೂ ನಂ. 1 ಶ್ರೀಮಂತರಾಗಿ ಮುಂದುವರಿದಿದ್ದರೂ ವೇಗವಾಗಿ ಇಳಿಯುತ್ತಿರುವ ಮಸ್ಕ್ ಶ್ರೀಮಂತಿಕೆ ವಿಶ್ವದ ಗಮನ ಸೆಳೆಯುತ್ತಿದೆ.

ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಷೇರುಗಳು ಸತತ ಏಳನೇ ವಾರವೂ ಕುಸಿದಿವೆ. ಇಷ್ಟು ದೀರ್ಘ ಕಾಲ ಷೇರುಗಳ ಬೆಲೆ ಕುಸಿದಿರುವುದು ಕಂಪನಿಯ ಇತಿಹಾಸದಲ್ಲಿ ಇದೇ ಮೊದಲು. ಡಿಸೆಂಬರ್ 17ರಂದು ಟೆಸ್ಲಾ ಷೇರಿನ ಬೆಲೆ 480 ಡಾಲರ್​ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಎಂಕ್ಯಾಪ್​ನಲ್ಲಿ ಕಂಪನಿ 800 ಶತಕೋಟಿ ಡಾಲರ್ ಕಳೆದುಕೊಂಡಿದೆ. ಮಸ್ಕ್ ಯಾವಾಗ ಟ್ರಂಪ್ ಸರ್ಕಾರದ ಭಾಗವಾದರೋ ಆಗಿನಿಂದ ಟೆಸ್ಲಾ ಷೇರಿನ ಬೆಲೆ ಹೆಚ್ಚಿನ ಮಟ್ಟದಲ್ಲಿ ಕೆಳಗಿಳಿಯುತ್ತಿದೆ ಎಂದು ಸಿಎನ್​ಬಿಸಿ ವರದಿ ಮಾಡಿದೆ. ಮಾ. 7ರಂದು ಅಂತ್ಯವಾದ ವಾರದಲ್ಲಿ ಟೆಸ್ಲಾ ಷೇರಿನ ಬೆಲೆ ಶೇ. 10ರಷ್ಟು ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net