ಭಾರತದಲ್ಲಿನ 2 ಟ್ವಿಟರ್​ ಕಚೇರಿಗಳು ಬಂದ್; ಮನೆಯಿಂದಲೇ ಕೆಲಸ ಮಾಡಿ ಎಂದ ಮಸ್ಕ್!

Twitter
Published on

ನವದೆಹಲಿ: ಸಿಇಒ ಸ್ಥಾನಕ್ಕೆ ಒಬ್ಬ ಮೂರ್ಖ ಸಿಕ್ಕಿದ ತಕ್ಷಣ ನಾನು ಆ ಸ್ಥಾನದಿಂದ ಇಳಿಯುತ್ತೇನೆ ಎಂದು ಹೇಳಿ, ನಿನ್ನೆಯಷ್ಟೇ ತನ್ನ ಸಾಕುನಾಯಿಯೊಂದನ್ನೇ ಸಿಇಒ ಎಂದು ಬಿಂಬಿಸಿಕೊಂಡಿದ್ದ ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್​ ಕುರಿತು ಇನ್ನೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಮಸ್ಕ್​ ಭಾರತಲ್ಲಿನ ಮೂರು ಕಚೇರಿಗಳ ಪೈಕಿ ಎರಡನ್ನು ಮುಚ್ಚಿದ್ದಾರೆ.

ರಾಜಕೀಯದ ಕೇಂದ್ರವಾಗಿರುವ ನವದೆಹಲಿ ಹಾಗೂ ಆರ್ಥಿಕತೆಯ ಕೇಂದ್ರವಾಗಿರುವ ಮುಂಬೈನಲ್ಲಿ ಇರುವ ಟ್ವಿಟರ್​ ಕಚೇರಿಗಳನ್ನು ಮಸ್ಕ್​ ಬಂದ್ ಮಾಡಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಸ್ಕ್​ ಟ್ಟಿಟರ್​ಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಸದೃಢವಾಗಲು ಪರದಾಡುತ್ತಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿರುವ ಟ್ವಿಟರ್​ ಕಚೇರಿಗಳಲ್ಲಿನ ಸುಮಾರು 200 ಉದ್ಯೋಗಿಗಳ ಪೈಕಿ ಈಗಾಗಲೇ ಶೇ. 90 ಮಂದಿಯನ್ನು ಮನೆಗೆ ಕಳಿಸಿರುವ ಮಸ್ಕ್​, ಈಗ ಎರಡು ಕಚೇರಿಗಳನ್ನು ಕೂಡ ಬಂದ್ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಟ್ವಿಟರ್​ ಕಚೇರಿ ಮಾತ್ರ ಭಾರತದಲ್ಲಿರುವ ಟ್ವಿಟರ್​ನ ಏಕೈಕ ಕಚೇರಿ ಆಗಿದ್ದು, ಮಸ್ಕ್ ಈ ನಡೆ ಇನ್ನಷ್ಟು ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net