ಎಲೋನ್ ಮಸ್ಕ್​ಗೆ 12ನೇ ಮಗು! ನ್ಯೂರಾಲಿಂಕ್ ಉದ್ಯೋಗಿಯೊಂದಿಗೆ 3ನೇ ಸಂತಾನ ಪಡೆದ ಟೆಸ್ಲಾ ಸಿಇಒ

musk
Published on

ವಾಷಿಂಗ್ಟನ್​: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಇತ್ತೀಚೆಗೆ ಮತ್ತೆ ತಂದೆಯಾಗಿದ್ದಾರೆ. ಇದರೊಂದಿಗೆ ಅವರ ಮಕ್ಕಳ ಸಂಖ್ಯೆ 11ಕ್ಕೆ ತಲುಪಿದೆ.

ನ್ಯೂರಾಲಿಂಕ್‌ನ ವಿಶೇಷ ಯೋಜನೆಗಳ ಮುಖ್ಯಸ್ಥೆ ಶಿವನ್ ಝೆಲಿಸ್ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. 2021ರಲ್ಲಿ ಈ ದಂಪತಿಗೆ ಅವಳಿ ಮಕ್ಕಳು ಜನಿಸಿರುವುದು ಈಗಾಗಲೇ ತಿಳಿದಿದೆ. ಮಸ್ಕ್ ಗೆ ಇದುವರೆಗೆ 10ಮಕ್ಕಳಿದ್ದು, ಇದು 11 ನೇ ಮಗುವಾಗಿದೆ.

ಮಸ್ಕ್​ ಅವರ ಮಕ್ಕಳಲ್ಲಿ ಐವರು ಅವರ ಮೊದಲ ಹೆಂಡತಿ ಜಸ್ಟಿನ್ ಗೆ ಜನಿಸಿದ್ದರು. ಮೂರು ಸಿಂಗರ್​ ಗ್ರಿಮ್ಸ್‌ಗೆ ಮತ್ತು ಇನ್ನೂ ಮೂರು ಜೆಲಿಸ್‌ಗೆ ಜನಿಸಿದರು.

2021 ರಲ್ಲಿ ಅವಳಿ ಮಕ್ಕಳು ಜನಿಸಿದಾಗ, "ನಮಗೆ ಹೆಚ್ಚು ಮಕ್ಕಳಿಲ್ಲದಿದ್ದರೆ ನಾಗರಿಕತೆ ಕುಸಿಯುತ್ತದೆ ಎಂದು ಮಸ್ಕ್ ಹೇಳಿದ್ದರು. ಮಸ್ಕ್ ತನ್ನೊಂದಿಗೆ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಿದನೆಂದು ಜೆಲಿಸ್ ಬಹಿರಂಗಪಡಿಸಿದ್ದರು.

ಇನ್ನು ಮಸ್ಕ್​ ತನ್ನ ಉದ್ಯೋಗಿಗಳೊಂದಿಗೆ ದೈಹಿಕ ಸಂಪರ್ಕಗಳನ್ನು ಹೊಂದುವುದು ಹೊಸದೇನಲ್ಲ. 2013 ರಲ್ಲಿ ಸ್ಪೇಸ್‌ಎಕ್ಸ್‌ನಲ್ಲಿ ಉದ್ಯೋಗ ತೊರೆದ ಮಹಿಳೆಯೊಬ್ಬರು ಮಸ್ಕ್ ತನ್ನೊಂದಿಗೆ ಮಕ್ಕಳನ್ನು ಹೊಂದಲು ಕೇಳಿಕೊಂಡರು ಎಂದು ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net