ಟ್ವಿಟರ್​ನಲ್ಲಿ ಅರ್ಧಕ್ಕರ್ಧ ಜನರ ಕೆಲಸ ಕಡಿತ; ಎಲಾನ್​ ಮಸ್ಕ್​ ತಲೆಯಲ್ಲಿ ಏನು ನಡಿತಾ ಇದೆ?

Elon Musk
Published on

ನವದೆಹಲಿ: ಟ್ವಟರ್​ ಸಂಸ್ಥೆ ಮಸ್ಕ್​ ನಿಯಂತ್ರಣಕ್ಕೆ ಬಂದ ಮೇಲೆ ಒಂದಿಲ್ಲಾ ಒಂದು ಸುದ್ದಿಗೆ ಗ್ರಾಸವಾಗುತ್ತಿದೆ. ಹಿಂದೆ ಬ್ಲೂ ಟಿಕ್​ ಪಡೆಯಲು ಹಣ ಪಾವತಿ ಮಾಡಬೇಕು ಎನ್ನುವ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿತ್ತು.

ಈಗ ಬಂದ ಹೊಸ ಸುದ್ದಿ ಏನೆಂದರೆ ಟ್ವಿಟರ್​ನಿಂದ ಸುಮಾರು 3700 ಜನರನ್ನು ತೆಗೆದು ಹಾಕಲಾಗುತ್ತಿದೆ. ಇದು ಟ್ವಿಟರ್​ನ ಒಟ್ಟು ಉದ್ಯೋಗಿಗಳ 50 ಶೇಕಡ. ಕೆಲಸ ಕಳೆದುಕೊಳ್ಳುವ ಭಯ ಈಗ ಟ್ವಿಟರ್​ನಲ್ಲಿ ಎಲ್ಲರಿಗೂ ಕಾಡುತ್ತಿದೆ.

ಈಗಾಗಲೇ ಮಸ್ಕ್​, 44 ಬಿಲಿಯನ್​ ಡಾಲರ್​ಗಳನ್ನು ಟ್ವಿಟರ್​ ಖರದಿಸಲು ಬಳಕೆ ಮಾಡಿದ್ದಾರೆ. ಹೀಗಾಗಿ ಈಗ ಎಲಾನ್​ ಮಸ್ಕ್​ಉಳಿತಾಯದ ಕಡೆಗೆ ಮುಖ ಮಾಡಬೇಕಾಗಿದೆ. ಆದರೆ ಉಳಿತಾಯ ಟ್ವಿಟರ್​ನಲ್ಲೇ ಆಗಲಿ ಎನ್ನುವುದು ಮಸ್ಕ್​ ಲೆಕ್ಕಾಚಾರ.

ಬ್ಯಾನ್​ ಮಾಡಿರುವ ಅಕೌಂಟ್​ಗಳನ್ನು ಮರಳಿ ತರುವ ಪ್ರಯತ್ನದಲ್ಲಿರುವ ಮಸ್ಕ್​, ಈಗ ಮತ್ತೊಂದು ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಮುಂದೆ ಟ್ವಿಟರ್​ ನೌಕರರು ವರ್ಕ್​ ಫ್ರಂ ಹೋಮ್​ ಮಾಡುವಂತಿಲ್ಲ. ಇನ್ನು ಉದ್ಯೋಗಿಗಳು ಹತ್ತಿರದ ಆಫೀಸಿಗೆ ಬಂದು ಕೆಲಸ ಮಾಡಬೇಕು. ವಿಶೇಷ ಸನ್ನಿವೇಶವನ್ನು ಎದುರಿಸುತ್ತಿರುವ ನೌಕರರಿಗೆ ಈ ಅವಕಾಶ ಮುಂದುವರೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net