14ನೇ ಮಗುವಿಗೆ ತಂದೆಯಾದ ಎಲಾನ್!; ಲವ್​ ಸಿಂಬಲ್​ ತೋರಿಸುವ ಮೂಲಕ ಮಸ್ತ್​ ಎಂದ ಮಸ್ಕ್​ | Musk

dk-2025-03-01t151511683-67c2d7487282b
Published on

Musk: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಉದ್ಯಮಿ ಎಲಾನ್​ ಮಸ್ಕ್​ ಇದೀಗ 14ನೇ ಮಗುವಿಗೆ ತಂದೆಯಾಗಿದ್ದಾರೆ. ಈ ಮೂಲಕ ಉದ್ಯಮಿಯಾಗಿ ಕೂಡ ಮಸ್ಕ್​ ಮಕ್ಕಳ ಪಡೆಯುವಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ. ಇನ್ನು 14ನೇ ಮಗುವಿನ ವಿಚಾರವನ್ನು ಎಲಾನ್​ ಮಸ್ಕ್​ ಸಂಗಾತಿ ನ್ಯೂರಾಲಿಂಕ್​ ಶಿವೋನ್​ ಜಿಲಿಸ್​​ ಬಹಿರಂಗಪಡಿಸಿದ್ದಾರೆ.

ಹೌದು, ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. '' ಮಗುವಿನ ವಿಚಾರವನ್ನು ಹೇಳಿರುವ ಶಿವೋಸ್​, ಮಗುವಿಗೆ ಸೆಲ್ಡಾನ್​ ಲೈಕರ್ಗಸ್​ ಎಂದು ಹೆಸರಿಸಲಾಗಿದೆ. ನಮ್ಮ ಮಗಳು ಆರ್ಕಾಡಿಯಾಳ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಮಗು ಸೆಲ್ಡಾನ್​ ಲೈಕರ್ಗಸ್​ ಬಗ್ಗೆ ಎಲ್ಲರಿಗೂ ಹೇಳಬೇಕೆಂದು ನಾನು ಇದೀಗ ನಿರ್ಧರಿಸಿದ್ದೇನೆ'' ಎಂದು ಪೋಸ್ಟ್​ ಮಾಡಿದ್ದಾರೆ.

ಕೋಮಲ ಹೃದಯವಂತಿಕೆ ಮತ್ತು ಕುಸ್ತಿಪಟುವಿನಂತಿದ್ದಾನೆ ಎಂದು ಹೇಳಿರುವ ಶಿವೋಸ್, ಮಗುವಿನ ಜನ್ಮ ದಿನಾಂ ಕ(ಯಾವಾಗ ಜನನ) ಬಹಿರಂಗಪಡಿಸಿಲ್ಲ. ಇನ್ನು ಈ ಪೋಸ್ಟ್​ಗೆ ಎಲಾನ್​ ಮಸ್ಕ್ ಕೂಡ ಹೃದಯದ ಎಮೋಜಿಯನ್ನು ಶೇರ್​ ಮಾಡಿದ್ದಾರೆ. ಈ ಮೂಲಕ 14ನೇ ಮಗುವಿಗೆ ತಂದೆ ಎನ್ನುವುದು ಎಲಾನ್​ ಕನ್ಫರ್ಮ್​ ಮಾಡಿದ್ದಾರೆ.

2021ರಲ್ಲಿ ಅವಳಿ ಮಕ್ಕಳ ಪಾಲಕರಾದ ಎಲಾನ್​ ಮತ್ತು ಶಿವೋಸ್​, 2024ರಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಇದೀಗ ನಾಲ್ಕನೇ ಮಗುವಿನ ಬಗ್ಗೆ ಬಹಿರಂಗಪಡಿಸಿದ್ದಾರೆ.

ಎಲಾನ್​ ಮಸ್ಕ್​ ಕುಟುಂಬ

ಶಿವೋಸ್​ ಜಿಲಿಸ್ ಅವರೊಂದಿಗಿನ ನಾಲ್ವರು ಮಕ್ಕಳ ಹೊರತಾಗಿ, ಎಲಾನ್​ ತಮ್ಮ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು ಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ ಅವಳಿ ಮಕ್ಕಳಾದ ವಿವಿಯನ್ ಮತ್ತು ಗ್ರಿಫಿನ್. ತ್ರಿವಳಿ ಮಕ್ಕಳಾದ ಕೈ, ಸ್ಯಾಕ್ಸನ್ ಮತ್ತು ಡಾಮಿಯನ್ ಸೇರಿದ್ದಾರೆ. ಅವರ ಮೊದಲ ಮಗು ನೆವಾಡಾ ಅಲೆಕ್ಸಾಂಡರ್ ಕೇವಲ 10 ವಾರಗಳ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಎರಡನೇ ಪತ್ನಿ ಎಂದೇ ಹೇಳಲಾಗಿರುವ, ಗ್ರಿಮ್ಸ್ ಅವರೊಂದಿಗೆ ಮೂವರು ಮಕ್ಕಳನ್ನು ಹೊಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net