ಈ ಊರಿನಂಚಿನಲ್ಲೇ ಬೀಡುಬಿಟ್ಟಿವೆ 30ಕ್ಕೂ ಹೆಚ್ಚು ಕಾಡಾನೆಗಳು! ಹೊರ ಬರದಂತೆ ಗ್ರಾಮಸ್ಥರಿಗೆ ನಿರ್ಬಂಧ

Elephant
Published on

ಆನೇಕಲ್​: ರಾಜ್ಯದ ಗಡಿ ಭಾಗದಲ್ಲಿ ಮೂವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಈ ಭಾಗದಲ್ಲಿ ಸಂಚರಿಸದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಅರಣಾಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಬಳಿಯ ಉದುತುರ್ಗಂ ಬಳಿ ಮರಿಯಾನೆಗಳು ಸೇರಿ 30ಕ್ಕೂ ಆನೆಗಳು ಬೀಡುಬಿಟ್ಟಿವೆ. ಹಾಗಾಗಿ ಈ ಭಾಗದಲ್ಲಿ ಜಾನುವಾರು ಮೇಯಿಸಲು ಬರದಂತೆ ನಿರ್ಬಂಧ ಏರಲಾಗಿದೆ. ಅಲ್ಲದೆ ಅರಣ್ಯಕ್ಕೆ ಹೋಗದಂತೆ ಸನಮಾವು ಅರಣ್ಯ ಪ್ರದೇಶದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೂ ಸೂಚಿಸಲಾಗಿದೆ. ಇದನ್ನೂ ಓದಿರಿ ಅಯ್ಯೋ ಅಮ್ಮ… ಎನ್ನುತ್ತ ಬಂದ ಪುಟ್ಟಕಂದನನ್ನೂ ಕೊಂದೇ ಬಿಟ್ಟ! ತಾಯಿಯದ್ದು ಅರ್ಧಜೀವ…

ಬಿರ್ಜೆಪಲ್ಲಿ, ರಾಮಪುರಂ, ಬೋಡೂರ್, ಅಲಿಯಾಲಂ ಮತ್ತು ಪಾತುಕೋಟ ವ್ಯಾಪ್ತಿಯಲ್ಲಿ ಕೂಲಿಗಾಗಿ ಕೆಲಸಕ್ಕೆ ಹೋಗುವವರಿಗೂ ಎಚ್ಚರಿಕೆ ನೀಡಿರುವ ಅರಣ್ಯ ಇಲಾಖೆ, ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯದಂಚಿನ ಕೆರೆಗಳಲ್ಲಿ ಓಡಾಡುತ್ತಿರುವ ಕಾಡಾನೆಗಳು ಸ್ಥಳದಿಂದ ಕದಲುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net