ಮನೆಯೊಳಗೆ ನುಗ್ಗಿದ ಆನೆ! Elephant Enters Home ವಿಡಿಯೋ ನೋಡಿ...

Elephant Enters Home
Published on

ತಮಿಳುನಾಡು: ( Elephant Enters Home ) ಇದ್ದಕ್ಕಿದ್ದಂತೆ ಕಾಡು ಆನೆಯೊಂದು ಮನೆಗೆ ನುಗ್ಗಿ ವಸ್ತುಗಳನೆಲ್ಲ ಚೆಲ್ಲಾಪಿಲ್ಲಿ ಮಾಡಿದೆ.  ಕಳೆದ ಶನಿವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಅನಿರೀಕ್ಷಿತ ಅತಿಥಿಯನ್ನು ಕಂಡು ಮನೆಯೊಳಗಿದ್ದವರು ಭಯಗೊಂಡಿದ್ದರು. ಈ ಘಟನೆಯನ್ನು ತಕ್ಷಣವೇ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.

ಕೊಯಮತ್ತೂರು ಜಿಲ್ಲೆಯ ತೆರಕ್ಕುಪಾಳ್ಯಂನಲ್ಲಿ ಆನೆಯೊಂದು ಕಾಡಿನಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ನುಗ್ಗಿ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದೆ.  ಈ ವೇಳೆ ಮನೆಯೊಳಗೆ ನಾಲ್ವರು ವಲಸೆ ಕಾರ್ಮಿಕರು ಇದ್ದರು. ಅದೃಷ್ಟವಶಾತ್ ಆನೆ ಅವರಿಗೆ ಹಾನಿ ಮಾಡಲಿಲ್ಲ. ತಿನ್ನಲು ಏನಾದ್ರು ಸುಗಬಹುದೇ ಎಂದು ಹುಡುಕಾಡಿದೆ.

ಘಟನೆಯ ವೇಳೆ ಕಾರ್ಮಿಕರು ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದಾಗ ಹೊರಗೆ ತಿರುಗಾಡುತ್ತಿದ್ದ ಆನೆ ಬಾಗಿಲು ಬಡಿದಿದೆ. ಆದರೆ, ಕಾರ್ಮಿಕರು ಆಗಲೇ ಎಚ್ಚೆತ್ತುಕೊಂಡು ಒಂದು ಕಡೆ ಅಡಗಿ ಕುಳಿತಿದ್ದಾರೆ. ಆದರೆ ಇನ್ನೂ ಆನೆ ತನಗೆ ತಿನ್ನಲು ಯೋಗ್ಯವಾದ ಏನಾದರೂ ಇದೆಯೇ ಎಂದು ನೋಡಲು ತನ್ನ ಸೊಂಡಿಲಿನಿಂದ ಬಾಗಿಲಿನೊಳಗೆ ನೋಡಲು ಪ್ರಯತ್ನಿಸಿತು. ಆನೆ ತನ್ನ ಸೊಂಡಿಲಿನಿಂದ ಮನೆಯೊಳಗಿದ್ದ  ಅಕ್ಕಿಯ ಚೀಲವನ್ನು ಎತ್ತಿಕೊಂಡಿತು. ಹಸಿವು ನೀಗಿಸಿಕೊಂಡ ಆನೆ ಯಾರಿಗೂ ತೊಂದರೆಯಾಗದಂತೆ ಸ್ಥಳದಿಂದ ತೆರಳಿದೆ.

 ಈ ವೀಡಿಯೊವನ್ನು @LiveupdatesUS ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ, ಇದು ವೇಗವಾಗಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net