ವಿದ್ಯುತ್‌ ಶಾಕ್‌ ತಗುಲಿ ಆನೆ ಸಾವು

Elephant Death
Published on

ದಾಂಡೇಲಿ: ವಿದ್ಯುತ್ ಶಾಕ್ ತಗುಲಿ ಆನೆಯೊಂದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಅಂಬಿಕಾನಗರ-ಕುಳಗಿ ರಸ್ತೆಯಲ್ಲಿ ಕುಳಗಿ ವನ್ಯಜೀವಿ ವಲಯದ ಜಮಗಾ ಶಾಖೆಯಲ್ಲಿ ಕಾಡಿನ ನಡುವೆ ಸುಮಾರು ೧೫ ವರ್ಷಗಳ ಹೆಣ್ಣು ಆನೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆನೆ ಆಹಾರ ಹುಡುಕುತ್ತ ಓಡಾಡುವಾಗ ತೇಗದ ಮರವೊಂದನ್ನು ನೂಕಿದೆ. ಮರವು ೨೨೦ ಕೆವಿ ವಿದ್ಯುತ್ ಲೈನ್‌ಗೆ ತಾಗಿ ವಿದ್ಯುತ್ ಪ್ರವಹಿಸಿದೆ. ಇದರಿಂದ ಆನೆ ಮೃತಪಟ್ಟಿದೆ. ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ಎಸಿಎಫ್ ಎನ್.ಎಸ್.ಕಳ್ಳಿಮಠ ನೇತೃತ್ವದಲ್ಲಿ ವನ್ಯಜೀವಿ ವಲಯದ ಅಽಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಂಡೇಲಿ ಪಶು ವೈದ್ಯಾಽಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ. ಆನೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net