ಇಸ್ಪೀಟ್​ನಲ್ಲಿ ಗೆಲ್ಲೋಕೆ ಹೈಟೆಕ್​ ಪ್ಲ್ಯಾನ್​, ಕಾರ್ಡ್​ನಲ್ಲಿರುತ್ತೆ ಕ್ಯಾಮರಾ!

ispit- arested
Published on

ಬೆಂಗಳೂರು: ಇಸ್ಪೀಟ್ ಆಟದಲ್ಲಿ ಎದುರಾಳಿಗೆ ಗೊತ್ತಾಗದಂತೆ ಮೋಸದಿಂದ ಗೆಲ್ಲುವ ಹೈಟೆಕ್​ತಂತ್ರ ಕಂಡುಕೊಂಡು ಹಣ ಮಾಡುತ್ತಿದ್ದ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಸ್ಮಾಯಿಲ್ ಬಂಧಿತ. ಜೂಜಾಡುವಾಗ ಕಾರ್ಡ್ ಬಗ್ಗೆ ಮಾಹಿತಿ ನೀಡುವ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಇಸ್ಪೀಟ್ ಎಲೆಗಳಿಗೆ ಇಸ್ಮಾಯಿಲ್​ ಅಳವಡಿಸುತ್ತಿದ್ದ. ಆಟ ಆಡುವ ಸಂದರ್ಭದಲ್ಲಿ ಮೋಸದಿಂದ ಹಣ ಮಾಡುತ್ತಿದ್ದ. ಅಲ್ಲದೆ ಇಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಮಾರಾಟ ಮಾಡುತ್ತಿದ್ದ. ಇದನ್ನೂ ಓದಿರಿ ಕ್ವಾರಂಟೈನ್​ ಕೇಂದ್ರದಲ್ಲಿ ಕಾಮುಕ! ಕಂಡಕಂಡ ಯುವತಿಯರ ಮೇಲೆರಗುತ್ತಾನೆ…

ಇಸ್ಪೀಟ್ ಎಲೆಗಳ ಮೇಲೆ ಮೈಕ್ರೋ ಕ್ಯಾಮರಾ, ಸ್ಕ್ಯಾನರ್, ಹಿಡನ್ ಕ್ಯಾಮರಾದಂತಹ ಉಪಕರಣ ಅಳವಡಿಸಿ ಮಾರಾಟ ಮಾಡುತ್ತಿದ್ದ ಇಸ್ಮಾಯಿಲ್​ನನ್ನು ಬಂಧಿಸಿದ ಸಿಸಿಬಿ ಪೊಲೀಸರು, ಆರೋಪಿ ಬಳಿ ಇದ್ದ 4 ಲಕ್ಷ ರೂಪಾಯಿ ಬೆಲೆ ಬಾಳುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net