ವಿದ್ಯುತ್ ದರ ಪರಿಷ್ಕರಣೆ ಮುಂದಿನ ವರ್ಷಕ್ಕೆ?

power
Published on

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಸತತವಾಗಿ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ಒಟ್ಟಿಗೆ ಮಾಡುವ ಲೆಕ್ಕಾಚಾರವಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಸೇರಿ ನಾನಾ ಕಾರಣಕ್ಕೆ ದರ ಪರಿಷ್ಕರಣೆ 1-2 ತಿಂಗಳು ಮುಂದೆ ಹೋದ ನಿದರ್ಶನಗಳಿವೆ. 7 ತಿಂಗಳು ಮುಂದೆ ಹೋಗಿದ್ದ ಉದಾಹರಣಗಳಿರಲಿಲ್ಲ. ಈ ವರ್ಷ ಹೊಸ ಸಂಪ್ರದಾಯಕ್ಕೆ ಕರೊನಾ ನಾಂದಿ ಹಾಡಿದೆ.

ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್​ಸಿ) ಸಾರ್ವಜನಿಕ ಅಹವಾಲು ಆಲಿಸಿದ್ದು, ಹೊಸ ದರ ಪ್ರಕಟ ಮಾಡಬೇಕಿತ್ತು. ಏಪ್ರಿಲ್​ನಿಂದ ಹೊಸ ದರ ಜಾರಿಗೆ ಬರಬೇಕಾಗಿತ್ತು. ಲಾಕ್​ಡೌನ್ ಅಡ್ಡಿಯಾಗಿತ್ತು. ಈಗ ಸದ್ಯಕ್ಕೆ ಹೊಸ ದರ ಘೋಷಣೆಯಾಗುವ ನಿರೀಕ್ಷೆಗಳಿಲ್ಲ. ಎಸ್ಕಾಂಗಳು ಪ್ರತಿ ಯುನಿಟ್​ಗೆ ಒಂದೂವರೆ ರೂ. ಏರಿಕೆ ಕೇಳಿದ್ದವು. ಕರೊನಾ ಹಿನ್ನೆಲೆಯಲ್ಲಿ ಪ್ರತಿ ಯುನಿಟ್​ಗೆ 10ರಿಂದ 20 ಪೈಸೆ ಏರಿಕೆ ಮಾಡುವ ಲೆಕ್ಕಾಚಾರವಿತ್ತು ಎಂದು ತಿಳಿದುಬಂದಿತ್ತು. ಕರೊನಾ ಸಂಕಷ್ಟ ಹೊತ್ತಿನಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಬಹುದು ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net