ಏಪ್ರಿಲ್​ನಲ್ಲಿ ಜನರಿಗೆ ವಿದ್ಯುತ್ ಶಾಕ್?

electricity
Published on

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆಗೆ ವೇದಿಕೆ ಸಿದ್ಧವಾಗಿದ್ದು, ಹೊಸ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್​ಸಿ) ಅಧ್ಯಕ್ಷ ಎಚ್.ಎಮ್ ಮಂಜುನಾಥ ಅಧ್ಯಕ್ಷತೆಯಲ್ಲಿ ಫೆ.14ರಿಂದ 28 ತನಕ ಎಸ್ಕಾಂಗಳಲ್ಲಿ ಸಾರ್ವಜನಿಕ ಅದಾಲತ್ ನಡೆದಿದ್ದು, ಅಭಿಪ್ರಾಯ ಸಂಗ್ರಹಣೆ ಮಾಡಿದೆ.

ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿದೆ. ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಬದುಕು ನಡೆಸುವುದು ದುಸ್ತರವಾಗಿದೆ. ವಿದ್ಯುತ್ ಬೆಲೆ ಏರಿಕೆ ಮಾಡಬೇಡಿ ಎಂದು ಸಾರ್ವಜನಿಕರು ಅದಾಲತ್​ನಲ್ಲಿ ಮನವಿ ಮಾಡಿದ್ದಾರೆ.

ಪ್ರತಿ ಯೂನಿಟ್​ಗೆ 1.50 ರಿಂದ 2 ರೂ. ತನಕ ಏರಿಕೆ ಬಗ್ಗೆ ಈಗಾಗಲೆ ಎಲ್ಲಾ ಎಸ್ಕಾಂಗಳು ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ಬೆಸ್ಕಾಂನಿಂದ ಪ್ರತಿ ಯೂನಿಟ್​ಗೆ 1.50 ರೂ. ಏರಿಕೆ ಪ್ರಸ್ತಾವ ಕೋರಲಾಗಿದೆ. ಕಂಪನಿಗಳು ನಷ್ಟ ದಲ್ಲಿರುವ ಕಾರಣ ವಿದ್ಯುತ್ ದರ ಏರಿಕೆ ಅನಿವಾರ್ಯ ಎನ್ನುವುದು ಎಸ್ಕಾಂಗಳ ವಾದವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net