ಪತ್ನಿ ಮನೆಗೆ ಹೋಗಿ ವಾಪಸ್​ ಬರುತ್ತಿದ್ದ ಪತಿ ರಸ್ತೆಯಲ್ಲೇ ಸುಟ್ಟುಕರಕಲಾದ!

death burn
Published on

ಸುಬ್ರಹ್ಮಣ್ಯ: ಪತ್ನಿ ಮನೆಗೆ ಹೋಗಿ ವಾಪಸ್​ ಬೈಕ್​ನಲ್ಲಿ ಬರುತ್ತಿದ್ದ ಪತಿ ಮಾರ್ಗಮಧ್ಯೆ ಸುಟ್ಟುಕರಕಲಾದ ದುರ್ಘಟನೆ ನಿಂತಿಕಲ್​ ಸಮೀಪದ ಕಲ್ಲೇರಿನಲ್ಲಿ ಮಂಗಳವಾರ ಸಂಭವಿಸಿದೆ.

ಮಂಡೆಕೋಲು ಗ್ರಾಮದ ಮೈತ್ತಡ್ಕ ತಿಮ್ಮಪ್ಪ ಗೌಡರ ಪುತ್ರ ಉಮೇಶ್​(45) ಮೃತರು. ಪತ್ನಿಯ ಮನೆ ಬಳ್ಪದ ಆಲ್ಕಬೆಗೆ ಹೋಗಿದ್ದ ಉಮೇಶ್​, ಮಂಗಳವಾರ ಮುಂಜಾನೆ ಸ್ವಗ್ರಾಮಕ್ಕೆ ವಾಪಸ್​ ಆಗುತ್ತಿದ್ದರು. ಈ ವೇಳೆ ವಿದ್ಯುತ್​ ತಂತಿಯ ರೂಪದಲ್ಲಿ ಉಮೇಶ್​ಗಾಗಿ ಕಾಯುತ್ತಿದ್ದ ಮೃತ್ಯು ಅವರ ಪ್ರಾಣವನ್ನೇ ತೆಗೆದಿದೆ.

ಕಲ್ಲೇರಿ ಎಂಬಲ್ಲಿ ವಿದ್ಯುತ್​ ತಂತಿ ರಸ್ತೆಗೆ ತಾಗಿತ್ತು. ಇದನ್ನರಿಯದ ಉಮೇಶ್​ ಬೈಕ್​ತಂತಿಯನ್ನು ಸ್ಪರ್ಶಿಸುತ್ತಿದ್ದಂತೆ ಸಜೀವ ದಹನವಾಗಿದ್ದಾರೆ. ಬೈಕ್​ ಕೂಡ ಸುಟ್ಟುಕರಕಲಾಗಿದೆ. ಉಮೇಶ್​ ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net