More

    ಹಸುಗೂಸನ್ನು ಬಾಳೆಎಲೆಯಲ್ಲಿ ಸುತ್ತಿ ಹೋಟೆಲ್​ನ ಕಸದ ತೊಟ್ಟಿಯಲ್ಲಿ ಎಸೆದರು!

    ಉಡುಪಿ: ಆಗಷ್ಟೇ ಜನಿಸಿದ ಹಸುಗೂಸನ್ನು ಕಿಡಿಗೇಡಿಗಳು ಹೋಟೆಲ್​ವೊಂದರ ಕಸದ ಬುಟ್ಟಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ಸೋಮವಾರ ಬೆಳಗ್ಗೆ ನಗರದಲ್ಲಿ ಸಂಭವಿಸಿದೆ.

    ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದ ಹೋಟೆಲ್​ನ ಕಸದಬುಟ್ಟಿಯಲ್ಲಿ ನವಜಾತ ಹೆಣ್ಣುಶಿಶು ಪತ್ತೆಯಾಗಿದೆ. ನಗರ ಸಭೆಯ ಸ್ವಚ್ಛತಾ ಸಿಬ್ಬಂದಿ ಕಸ ಸಂಗ್ರಹಿಸಲೆಂದು ಬೆಳಗ್ಗೆ ಬಂದಿದ್ದರು. ಆ ವೇಳೆ ತ್ಯಾಜ್ಯ ತುಂಬಿದ್ದ ಪೈಂಟ್ ಡಬ್ಬಿಯ ಒಳಗೆ ಬಾಳೆಎಲೆಯ ಮೇಲೆ ಮಗು ಇರುವುದು ಗೊತ್ತಾಗಿದೆ.

    ಇದನ್ನೂ ಓದಿರಿ ದೇವಸ್ಥಾನದ ನಿಧಿ ದೋಚಲು ಬಂದವ ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಗಂಭೀರ

    ಕಸದ ತೊಟ್ಟಿಯಲ್ಲಿ ಪತ್ತೆಯಾದ ಮಗುವನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತೂಕ 1.200 ಗ್ರಾಂ ಇದೆ. ಮಗುವನ್ನು ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಕ್ಕಳ ಪರಿವೀಕ್ಷಣಾಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ.

    ಆಗಷ್ಟೇ ಜನ್ಮತಾಳಿದ ಶಿಶುವನ್ನು ಹೆತ್ತವರು ಇಲ್ಲವೇ ಅವರ ಸಂಬಂಧಿಕರೇ ಕಸದ ಬುಟ್ಟಿಗೆ ಹಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳು ದೇವರ ಪ್ರತಿರೂಪ ಅಂತಾರೆ. ಮಗು ಬೇಡವಾಗಿದ್ದರೆ ಮಮತೆಯ ತೊಟ್ಟಿಲುಗಾದರೂ ಹಾಕಬಹುದಿತ್ತು. ಆದರೆ, ಏನೂ ಅರಿಯದ ಕಂದಮ್ಮನನ್ನು ಕಸದಬುಟ್ಟಿಗೆ ಹಾಕುವಷ್ಟು ಹೀನಕೃತ್ಯವೆಸಗಬಾರದಿತ್ತು. ಕಸದ ಬುಟ್ಟಿಯಲ್ಲಿದ್ದ ಮಗು ಹಸಿವು ಮತ್ತು ಚಳಿ ತಾಳಲಾರದೆ ಅಳುತ್ತಿದೆ ಎಂದು ಸ್ಥಳೀಯರು ಮಮ್ಮಲ ಮರುಗಿದರು.

    ಗೃಹಪ್ರವೇಶಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ನದಿಗೆ ಹಾರಿದ್ಳು ಪತ್ನಿ, ನೇಣು ಬಿಗಿದುಕೊಂಡ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts