ಲೈನ್‌ಮ್ಯಾನ್‌ಗೆ ವಿದ್ಯುತ್ ಶಾಕ್

VERESH
VERESH
Published on

ರಾಯಚೂರು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ಏಕಾಎಕಿ ವಿದ್ಯುತ್ ಪ್ರವಹಸಿ ಲೈನಮ್ಯಾನ ಗಂಬೀರವಾಗಿ ಗಾಯಗೊಂಡ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ಮಂಗಳವಾರ ಸಂಜೆ ಜರುಗಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಮೂಲದ ವಿರೇಶ ಎಂಬಾರ ಗಾಯಗೊಂಡಿದ್ದಾನೆ. ೧೧೦ ಕೆ.ವಿ ವಡವಾಟಿ ಉಪಕೇಂದ್ರದಲ್ಲಿ ದುರಸ್ತಿ ಮತ್ತು ಸುದಾರಣಾ ಕಾಮಗಾರಿ ಮಾಡಲು ವಿದ್ಯುತ್ ಕಂಬ ಹತ್ತಿದ್ದ ಲೈನ್‌ಮ್ಯಾನ್‌ಗೆ ಜೆಸ್ಕಾಂ ಇಲಾಖೆಯ ನಿರ್ಲಕ್ಷತೆಯಿಂದ ಹಾಗೂ ಮುಂಚಿತವಾಗಿ ಮಾಹಿತಿ ನೀಡದೇ ವಿದ್ಯುತ್ ಪ್ರಸಾರ ಪ್ರಾರಂಭಿಸಿದ್ದರಿAದ ಕಂಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿರೇಶ ಕೈ ಕಾಲಿಗೆ ಸುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ರವಾನಿಸಲಾಗಿದೆಮದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net