ಗಲ್ಲಿ ಕ್ರಿಕೆಟ್ ಮೂಲಕ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು

29-RNR-03
Published on

ಹಾವೇರಿ: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ನಗರದ ಭಾನುವಾರದ ಸಂತೆಯ ಬೀದಿಯೊಂದರಲ್ಲಿ ಗಲ್ಲಿ ಕ್ರಿಕೆಟ್ ಆಯೋಜಿಸುವುದರ ಮೂಲಕ ಮತದಾರರ ಗಮನ ಸೆಳೆಯಿತು.
ನಗರದ 11ನೇ ವಾರ್ಡ್‌ನ ಬಸವೇಶ್ವರ ನಗರದ ರಸ್ತೆಯಲ್ಲಿ ಭಾನುವಾರದ ಸಂತೆ ನಡೆಯುವ ಬೀದಿಯಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ ಅವರು ಬ್ಯಾಟ್ ಬಿಸುವುದರ ಮೂಲಕ ಗಲ್ಲಿ ಕ್ರಿಕೆಟ್‌ಗೆ ಚಾಲನೆ ನೀಡಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಿಗೆ ಸಂದೇಶ ನೀಡಿದರು.
ನಂತರ ಸಂತೆಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ, ಅಂಗಡಿಗಳ ಮಾಲೀಕರಿಗೆ ಹಾಗೂ ಮನೆ ಮನೆಗೆ ತೆರಳಿ ಮತದಾನ ಜಾಗೃತಿ ಕರಪತ್ರ ವಿತರಿಸುವ ಮೂಲಕ ಮೇ 7ರಂದು ಸಮಯಾವಕಾಶ ಕಲ್ಪಿಸಿಕೊಂಡು ತಮ್ಮ ವ್ಯಾಪಾರ, ದೈನಂದಿನ ಕಾರ್ಯಗಳನ್ನು ಬದಿಗಿರಿಸಿ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದರು.
ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಲೆಕ್ಕಾಧಿಕಾರಿ ವಸಂತಕುಮಾರ, ಸಹಾಯಕ ಸಂಖ್ಯಿಕ ಅಧಿಕಾರಿ ಕುಮಾರ ಮಣ್ಣವಡ್ಡರ, ಪದವಿ ಪೂರ್ವ ಶಿಕ್ಷಣ ಇಾಖೆ ಉಪನಿರ್ದೇಶಕ ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ನಿಡಗುಂದಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜು ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net