ಏ. 28ಕ್ಕೆ ಕೋಚಿಮುಲ್​ಗೆ ಚುನಾವಣೆ

kochimul Head office kolar
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಗಳ ಒಕ್ಕೂಟ (ಕೋಚಿಮುಲ್​) ಆಡಳಿತ ಮಂಡಳಿ ಚುನಾವಣೆ ಏ. 28ಕ್ಕೆ ನಿಗದಿಯಾಗಿದೆ. ಒಕ್ಕೂಟದ ಅವಧಿ ಮೇ 12ಕ್ಕೆ ಮುಗಿಯಲಿದ್ದು, 15 ದಿನಗಳ ಮುಂಚೆಯೇ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಪಡಿಸಿ ಜಿಲ್ಲಾಧಿಕಾರಿ ಹಾಗೂ ೆಡರಲ್​ ಸಹಕಾರ ಸಂಗಳ ಚುನಾವಣಾಧಿಕಾರಿ ಆದೇಶಿಸಿದ್ದಾರೆ.

ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸಹಕಾರ ಇಲಾಖೆ ಹಾಗೂ ಒಕ್ಕೂಟಕ್ಕೆ ಚುನಾವಣಾಧಿಕಾರಿ ಪತ್ರ ಬರೆದಿದ್ದರು. ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಟ್ಟು 1,928 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಗಳು ಸಕ್ರಿಯವಾಗಿದ್ದು, ಕೋಲಾರ ಜಿಲ್ಲೆಯಲ್ಲಿ 952 ಹಾಗೂ ಚಿಕ್ಕಬಳ್ಳಾಪುರ 976 ಸಂಗಳು ಕಾರ್ಯನಿರ್ವಹಿಸುತ್ತಿವೆ. ಬರಗಾಲದಲ್ಲೂ 9 ಲಕ್ಷಕ್ಕೂ ಹೆಚ್ಚು ಲೀ. ಪ್ರತಿದಿನ ಒಕ್ಕೂಟಕ್ಕೆ ಹಾಲು ಪೂರೈಕೆಯಾಗುತ್ತಿದೆ. ಎರಡೂ ಜಿಲ್ಲೆಗಳಿಂದ 13 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, ಕೋಚಿಮುಲ್​ನಲ್ಲಿ ಅಧಿಕಾರದಲ್ಲಿ ಇರುವ ಆಡಳಿತ ಮಂಡಳಿಯ ಅಧಿಕಾರವಧಿ ಮೇ 12ರಂದು ಮುಕ್ತಾಯವಾಗಲಿದೆ.
ಕೋಚಿಮುಲ್​ ಆಡಳಿತ ಮಂಡಳಿಯು 2019ರಲ್ಲಿ ಅಧಿಕಾರಕ್ಕೆ ಬಂದಿದ್ದು ಅಧಿಕಾರಾವಧಿ ಅಂತ್ಯಗೊಳ್ಳುತ್ತಿರುವುದರಿಂದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಆಯ್ಕೆಗೆ ಮತದಾರರ ಪಟ್ಟಿ ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಹಕಾರ ಚುನಾವಣೆ ಪ್ರಾಧಿಕಾರದ ಆಯುಕ್ತರು ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದರು. ಚುನಾವಣಾಧಿಕಾರಿ ಆದೇಶದ ಮೇರೆಗೆ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದ್ದು, ಇದೀಗ ಚುನಾವಣೆಯ ದಿನಾಂಕ ಘೋಷಣೆಯಾಗಿದೆ.
ಆಡಳಿತ ಮಂಡಳಿಯಲ್ಲಿ 13 ನಿರ್ದೇಶಕರ ಸ್ಥಾನಗಳಿದ್ದು, ಆ ಪೈಕಿ ಹಳೇ ನಿರ್ದೇಶಕರೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಅಭ್ಯರ್ಥಿಗಳು ಹಾಗೂ ಹೊಸಬರು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ತೀವ್ರ ಸದ್ದು ಮಾಡಿದ್ದು, ಮತ್ತೆ ಅವರೇ ಅಧಿಕಾರಕ್ಕೆ ಬರಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.
ಪೂರಕ ವಾತಾವರಣ ನಿರ್ಮಾಣ ಯತ್ನ
ಕೆಲ ಹಾಲಿ ನಿರ್ದೇಶಕರು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಪೂರಕವಾದ ವಾತಾವರಣ ಸೃಷ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿನ ಸಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತಮಗೆ ಖಚಿತವಾಗಿ ಮತ ಹಾಕುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮತ ಪಡೆದುಕೊಳ್ಳಲು ಹಗರಣಗಳ ಅಸ್ತ್ರ
ಹೊಸಬರು ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಹಲವರು ಸಂಗಳ ಅಧ್ಯಕ್ಷರನ್ನು ಭೇಟಿ ಮಾಡಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮತ ಗಿಟ್ಟಿಸಿಕೊಳ್ಳಲು ಹಾಲಿ ಆಡಳಿತ ಮಂಡಳಿಯ ಅವಧಿಯಲ್ಲಿ ಆಗಿರುವ ಹಗರಣಗಳನ್ನು ಮುಂದಿಟ್ಟುಕೊಂಡಿದ್ದಾರೆ. ಪ್ರಮುಖವಾಗಿ ನೇಮಕಾತಿ ಪ್ರಕ್ರಿಯೆ ಹೊಸಬರಿಗೆ ಪ್ರಮುಖ ಅಸ್ತ್ರವಾಗಲಿದೆ. ಮತಗಳನ್ನು ಹೇಗೆ ಪಡೆಯಬೇಕು ಎಂದು ತಂತ್ರಗಾರಿಕೆ ಹೊಂದಿರುವ ಹಾಲಿ ನಿರ್ದೇಶಕರನ್ನು ಮಣಿಸಲು ಹೊಸಬರು ಹಲವು ಪ್ರಯತ್ನ ಮಾಡುತ್ತಿದ್ದಾರೆ. ಅವರು ಸಹ ಸಂದ ಚುನಾವಣೆಗಳಲ್ಲಿ ಪಾತ್ರವಹಿಸುವುದು, ಬಂಡವಾಳ ಹಾಕುವುದು ಹಾಗೂ ಇದರ ಜತೆಗೆ ಮತದಾರರನ್ನು ಸೆಳೆಯಲು ಉಡುಗೊರೆ ನೀಡಲು ಮುಂದಾಗಿದ್ದಾರೆ. ಮತಕ್ಕಾಗಿ ಸಂದ ಅಧ್ಯಕ್ಷರನ್ನು ಸಂಪರ್ಕಿಸಿ ಚರ್ಚೆ ಮಾಡುತ್ತಿದ್ದಾರೆ.
ಚುನಾವಣಾ ವೇಳಾಪಟ್ಟಿ
ಅಧಿಕಾರ ಮುಕ್ತಾಯಗೊಳ್ಳುವ 15 ದಿನಗಳ ಪೂರ್ವದಲ್ಲಿ ಹೊಸ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆ ದಿನಾಂಕದ ನಿಕಟಪೂರ್ವದ 5ನೇ ದಿನ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನಿಕಟಪೂರ್ವ 6ನೇ ದಿನ ನಾಮಪತ್ರಗಳ ಪರಿಶೀಲನೆ, ನಿಕಟಪೂರ್ವ 3ನೇ ದಿನ ಕಣದಲ್ಲಿ ಉಳಿದಿರುವವರಿಗೆ ಚಿಹ್ನೆ ಹಂಚಿಕೆ, ಅವಶ್ಯಕತೆಯಿದ್ದಲ್ಲಿ ಏ.28ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಆನಂತರ ಮತಗಳ ಏಣಿಕೆ ನಡೆಯಲಿದೆ.
ದುಬಾರಿ ಅಮಿಷವೊಡ್ಡಲು ಸಿದ್ಧತೆ
ಒಕ್ಕೂಟದ ಕಳೆದ ಅವಧಿಯ ಚುನಾವಣೆ ಬಹಳ ದುಬಾರಿಯಿಂದ ನಡೆದಿತ್ತು. ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ನಡೆಯುವ ಲಕ್ಷಣಗಳಿವೆ. ಕಳೆದ ಬಾರಿ ಮತಗಳನ್ನು ಗಿಟ್ಟಿಸಿಕೊಳ್ಳಲು ವೆಂಕಟರಮಣ ಸ್ವಾಮಿ ೋಟೊ, ಬೈಕ್​, ಬೆಳ್ಳಿ ಅಭರಣ ಹೀಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net