ಕರ್ನಾಟಕ ವಿಧಾನಪರಿಷತ್ತಿನ 11 ಸ್ಥಾನಕ್ಕೆ ಚುನಾವಣೆ ಘೋಷಣೆ

MLCeletion
Published on

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ತೆರವಾದ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಜೂನ್​ 13ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನಾವಾಗಿದ್ದು, ಜೂನ್​ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗಿರುವ 11 ಸದಸ್ಯರ ಅಧಿಕಾರವಾಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇಂದು (ಮೇ 20) ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ಮೇಲ್ಮನೆಯ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.

ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದ ರಘುನಾಥ್​ ರಾವ್​ ಮಲ್ಕಾಪುರೆ, ಎನ್​.ರವಿಕುಮಾರ್​. ಎಸ್​. ರುದ್ರೇಗೌಡ, ಕೆ. ಹರೀಶ್ ಕುಮಾರ್, ಅರವಿಂದ್​ ಕುಮಾರ್​ ಅರಳಿ, ಎನ್​.ಎಸ್​, ಬೋಸರಾಜು. ಕೆ.ಗೋವಿಂದ್​ರಾಜ್​. ಡಾ.ತೇಜಸ್ವಿನಿ ಗೌಡ. ಮುನಿರಾಜುಗೌಡ ಪಿ.ಎಂ. ಕೆ.ಪಿ. ನಂಜುಂಡಿ. ಬಿ.ಎಂ.ಫಾರುಕ್​ ಅವರ ಅವಧಿ ಕೊನೆಯಾಗಲಿದೆ. ಆ ಹಿನ್ನೆಲೆಯಲ್ಲಿ ತೆರವಾದ 11 ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net