

ಬೆಂಗಳೂರು:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬಿಕೋ ಎನ್ನುತ್ತಿದ್ದ ಅಧಿಕಾರದ ಶಕ್ತಿ ಸೌಧವಾದ ವಿಧಾನಸೌಧ ಮತ್ತು ವಿಕಾಸಸೌಧ ಇನ್ನು ಮುಂದೆ ಕಳೆಗಟ್ಟಲಿದೆ.
ಲೋಕಸಭೆ ಚುನಾವಣೆ ೋಷಣೆಯಾದ ಮಾ.16 ಕ್ಕೆ ಮಾದರಿ ನೀತಿ ಸಂಹಿತೆಯೂ ಜಾರಿಗೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕೃತ ಕಾರು ತ್ಯಜಿಸಿದ್ದ ಸಚಿವರು ವಿಧಾನಸೌಧದ ಕಡೆಗೆ ಮುಖ ಮಾಡಿರಲಿಲ್ಲ. ಅಷ್ಟೆ ಅಲ್ಲ, ಶಾಸಕರು ಕೂಡ ಶಕ್ತಿ ಸೌಧದಿಂದ ದೂರವೇ ಉಳಿದಿದ್ದರು.
ಚುನಾವಣೆ ೋಷಣೆಯಾದ ಬೆನ್ನಲ್ಲಿಯೇ ಐಎಎಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಸಿಬ್ಬಂದಿಗಳು ಚುನಾವಣಾ ಆಯೋಗದ ಸುಪರ್ದಿಗೆ ಒಳಪಟ್ಟಿದ್ದರು. ಚುನಾವಣೆ ನಿರ್ವಹಣೆಯ ಹೊಣೆಗಾರಿಕೆ ಮತ್ತು ಜವಬ್ದಾರಿ ಆಡಳಿತ ಯಂತ್ರದ ಮೇಲೆ ಇದ್ದ ಕಾರಣ ಬಹುತೇಕ ಕಾರ್ಯಾಂಗದ ಕೆಲಸಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು.
ಗ್ಯಾರಂಟಿಗಳ ಜೋಷ್‌ನಲ್ಲಿದ್ದ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ೆಬ್ರವರಿಯಲ್ಲಿ 2ನೇ ಬಜೆಟ್ ಮಂಡನೆ ಮಾಡಿದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಸಮಯವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಬಹುತೇಕ ಕಾರ್ಯಕ್ರಮಗಳು ೋಷಣೆಯಲ್ಲಿಯೇ ಬಾಕಿಯಾಗಿದ್ದವು. ಟೆಂಡರ್ ಕೆಲಸಗಳು ಇದ್ದಲ್ಲಿಗೆ ನಿಂತಿದ್ದವು.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಎರಡು ದಿನ ಔಪಚಾರಿಕವಾಗಿ ವಿಧಾನಸೌಧಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಒಮ್ಮೆ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು.
ಚುನಾವಣೆ ನೀತಿ ಸಂಹಿತೆ ಮುಗಿದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಬರಲಿರುವ ಸಚಿವರು ತಮ್ಮ ಕಾರ್ಯ ಚಟುವಟಿಕೆ ಪ್ರಾರಂಭಿಸಲಿದ್ದಾರೆ. ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಲಿದ್ದಾರೆ.
ಸಂಪುಟ ಸಭೆ, ಅಧಿಕಾರಿಗಳ ಸಭೆ ಮತ್ತು ಬಜೆಟ್‌ನಲ್ಲಿ ೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಲಿದೆ.