ಉಪರಾಷ್ಟ್ರಪತಿ ಚುನಾವಣೆ; ಲಾಲು ಪ್ರಸಾದ್ ಯಾದವ್ ಭೇಟಿಯಾದ ನ್ಯಾ.ಸುದರ್ಶನ್ ರೆಡ್ಡಿ; ನೀವು ಯಾವ ರೀತಿಯ ನ್ಯಾಯಾಧೀಶರೆಂದ ಬಿಜೆಪಿ| Lalu Yadav Meet

Lalu yadav-sudarshan Reddy
Published on

Lalu Yadav Meet: ನಾಳೆ(ಸೆ. 09) ನಡೆಯಲಿರುವ ಉಪರಾಷ್ಟ್ರತಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಿವೃತ್ತ ಸುಪ್ರೀಂಕೋರ್ಟ್​ ನ್ಯಾಯಾಮೂರ್ತಿ ಬಿ.ಸುದರ್ಶನ್​ ರೆಡ್ಡಿ ಬಿಹಾರದಲ್ಲಿ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭೇಟಿಯಾಗಿ ಬೆಂಬಲ ಕೇಳಿದ್ದರ ಬಗ್ಗೆ ಸೋಮವಾರ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಮೇವು ಹಗರಣದಲ್ಲಿ ಆರೋಪ ಹೊತ್ತಿರುವ ಲಾಲು ಯಾದವ್ ಅವರನ್ನು ನ್ಯಾ.ಸುದರ್ಶನ್ ರಡ್ಡಿ ಕಳೆದ ವಾರ ಭೇಟಿಯಾಗಿ ಚರ್ಚೆ ನಡೆಸಿದ್ದರು. ಜೊತೆ ಸಂಸದರಿಗೆ ವಿಡಿಯೋ ಮೂಲಕ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಕೆ ಈ ಚುನಾವಣೆಯಲ್ಲಿ ಯಾವುದೇ ರೀತಿಯ ಪಕ್ಷದ ವಿಪ್ ಅನ್ವಯಿಸುವುದಿಲ್ಲ. ರಾಷ್ಟ್ರದ ಆತ್ಮವನ್ನು ಉಳಿಸಲು, ದೇಶಕ್ಕಾಗಿ ನನಗೆ ಮತ ಹಾಕಿ ಆಯ್ಕೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಸದ್ಯ ಸುದರ್ಶನ್ ರೆಡ್ಡಿಯವರು ಮನವಿ ಬಗ್ಗೆ ಕಿಡಿಕಾರಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಕಳೆದ ವಾರ ಬಿಹಾರದ ಪಾಟ್ನಾದಲ್ಲಿ ಲಾಲು ಯಾದವ್ ಮನೆಯಲ್ಲಿ ನಡೆದ ಸಭೆಯು ನ್ಯಾಯಮೂರ್ತಿ ರೆಡ್ಡಿ ಅವರ ಬೂಟಾಟಿಕೆಗೆ ಸಮನಾಗಿದೆ. ನೀವು ಎಂತಹ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು? ಹಗರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ನೀವು ಭೇಟಿಯಾಗಿದ್ದೀರಿ? ಇದು ಬೂಟಾಟಿಕೆ ಅಲ್ವಾ, ದಯವಿಟ್ಟು 'ರಾಷ್ಟ್ರದ ಆತ್ಮ'ದ ಬಗ್ಗೆ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ, ನ್ಯಾ,ಸುದರ್ಶನ್ ರೆಡ್ಡಿಯವರನ್ನು ಟೀಕಿಸಿದ್ದು, ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಶಿಕ್ಷೆಗೊಳಗಾಗಿದ್ದು, ಅವರನ್ನು ಸುದರ್ಶನ್ ರೆಡ್ಡಿಯವರು ಭೇಟಿಯಾಗಿದ್ದಾರೆ. ಲಾಲು ಯಾದವ್ ಸಂಸತ್ ಸದಸ್ಯರಲ್ಲ.  ಅವರಿಗೆ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿಲ್ಲ.

ಈ ಭೇಟಿಯು ಕೇವಲ ಆರೋಪಕ್ಕೆ ಸೀಮಿತವಾಗಿಲ್ಲ, ಬದಲಿಗೆ ಉನ್ನತ ಸಾಂವಿಧಾನಿಕ ಹುದ್ದೆಗೆ ಆಕಾಂಕ್ಷಿಯಾಗಿರುವ ವ್ಯಕ್ತಿಯಿಂದ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ರಾಜಕೀಯ ವಲಯಗಳಲ್ಲಿ ಈ ಭೇಟಿಯು ಸುದರ್ಶನ್ ರೆಡ್ಡಿಯವರ ನಿರ್ಧಾರದ ಸಾಮರ್ಥ್ಯ ಮತ್ತು ನೈತಿಕ ದೃಷ್ಟಿಕೋನವನ್ನು ಚರ್ಚೆಗೆ ಒಡ್ಡಿದೆ ಎಂದಿದ್ದಾರೆ.

ನಾಳೆ ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಕೂಟಕ್ಕೆ ಬಹುಮತ ಇದ್ದು, ಅಭ್ಯರ್ಥಿ ರಾಧಾಕೃಷ್ಣನ್ ಗೆಲ್ಲುವ ನಿರೀಕ್ಷೆಯಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್ ಕಾಂಗ್ರೆಸ್, ಕೆಸಿಆರ್ ನೇತೃತ್ವದ ಬಿಆರ್​ಎಸ್, ಬಿಜೆಡಿ ಪಕ್ಷದ ಸಂಸದರು ವಿರುದ್ಧವಾಗಿ ಮತ ಚಲಾಯಿಸಿದ್ರು ಎನ್​ಡಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ.  ನ್ಯಾಯಮೂರ್ತಿ ರೆಡ್ಡಿ ಅವರು ಇಂಡಿಯಾ ಅಭ್ಯರ್ಥಿಯಾದಾಗಿನಿಂದ ಅವರನ್ನು ಗುರಿಯಾಗಿಸಿ ಟೀಕೆ ಮಾಡ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net