

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘಕ್ಕೆ ನಡೆದ ಮತದಾನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕಾರ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಈ ದಿಸೆಯಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಚುನಾವಣೆಯ ಮೂಲಕ ಆಯ್ಕೆಆದ ವಿದ್ಯಾರ್ಥಿ ಜನಪ್ರತಿನಿಧಿಗಳು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚೇಂದ್ರಿಮಡ ಗಿಲ್ ಸೋಮಯ್ಯ , ಕಾರ್ಯದರ್ಶಿಗಳಾದ ಬಡುವಂಡ ಅರುಣ್ ಅಪ್ಪಚ್ಚು, ನಿರ್ದೇಶಕರಾದ ಮುಂಡಂಡ ನೀಲವ್ವ ಮುತ್ತಣ್ಣ, ಪ್ರಾಂಶುಪಾಲರಾದ ಸುಮಿತ್ರಾ ಎಂ.ಎ., ಉಪಪ್ರಾಂಶುಪಾಲರಾದ ಎಂ.ಡಿ.ಹೇಮಾವತಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಯ್ಕೆಯಾದ ನೂತನ ವಿದ್ಯಾರ್ಥಿ ನಾಯಕರು: ಪ್ರೌಢಶಾಲಾ ವಿಭಾಗ: ಶಾಲಾ ನಾಯಕ ಬಿ.ಎ.ಅಭಿಷೇಕ್ ರೈ, ಶಾಲಾ ಉಪನಾಯಕಿ: ಎಂ.ಯುಹಬೀಬಾ, ಶಾಲಾ ಶಿಸ್ತುನಾಯಕ ಎ.ಎನ್.ಸುರೇಶ, ಶಾಲಾ ಉಪ ಶಿಸ್ತುನಾಯಕಿ ಮಾಚಮ್ಮ, ಸಾಂಸ್ಕೃತಿಕ ನಾಯಕಿ: ಆರ್.ಪ್ರಕೃತಿ, ಸಾಂಸ್ಕೃತಿಕ ಉಪನಾಯಕಿ: ಪಿ.ಪಿ.ಸ್ಪಂದನಾ, ಕ್ರೀಡಾನಾಯಕ ಬಿ.ಅಪ್ಸಲ್, ಕ್ರೀಡಾ ಉಪನಾಯಕ ಆಶೀರ್ ,ಕಾಲೇಜು ವಿಭಾಗದಲ್ಲಿ ಕಾಲೇಜು ನಾಯಕಿ: ಅನುಶಿಕಾ, ಉಪನಾಯಕಿ ಮೋನಿಷಾ, ಶಿಸ್ತು ನಾಯಕಿ ಧನ್ಯಾ, ಉಪನಾಯಕಿ ಶಾಲಿನಿ, ಸಾಂಸ್ಕೃತಿಕ ನಾಯಕಿ ಕುಶ್ಮಿತಾ, ಉಪನಾಯಕಿ ನಿಂಚನಾ, ಕ್ರೀಡಾ ನಾಯಕ ತೋಹಿಬ್, ಉಪನಾಯಕ ಆಫ್ನಾಜ್.