

ಸರಗೂರು: ತಾಲೂಕಿನ ಪ.ಜಾತಿ ಮತ್ತು ಪ.ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾಗಿ ಎಂ.ಬಿ.ಮಹದೇವ ಮತ್ತು ಬಿ. ಮಟಕರೆ ಗ್ರಾಪಂ ಪಿಡಿಒ ಭಾಗ್ಯಮ್ಮ ಉಪಾಧ್ಯಕ್ಷೆ ಯಾಗಿ ಆಯ್ಕೆಯಾದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ.ಜಾತಿ ಮತ್ತು ಪ.ಪಂಗಡ ಅಧಿಕಾರಿಗಳು ಹಾಗೂ ನೌಕರರ ಸಭೆ ಆಯೋಜಿಸಲಾಗಿ, ಜಿಲ್ಲಾಧ್ಯಕ್ಷ ಪ್ರಕಾಶ್ ಹಾಗೂ ಖಜಾಂಚಿ ಮಹದೇವ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಸಮಿತಿ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಕಾಶ್, ಪ.ಜಾತಿ ಮತ್ತು ಪ.ಪಂಗಡ ಸರ್ಕಾರಿ ನೌಕರರು ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಸರ್ಕಾರಿ ನೌಕರರು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ,ಮಹದೇವ ಮಾತನಾಡಿ, ತಾಲೂಕಿನಲ್ಲಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ನೌಕರರ ಸಮಸ್ಯೆ ಪರಿಹಾರಕ್ಕೆ ಅವರು ಮುಂದಾಗುತ್ತೇನೆ ಎಂದರು.
ನೂತನ ಪದಾಧಿಕಾರಿಗಳು: ಪ.ಪಜಾತಿ ಹಾಗೂ ಪ.ಪಂಗಡ ತಾಲೂಕು ಗೌರವಾಧ್ಯಕ್ಷ ಕಾರ್ಯದರ್ಶಿ ಗ್ರೇಡ್-1 ನರಸಿಂಹ ಮೂರ್ತಿ, ತಾಲೂಕು ಅಧ್ಯಕ್ಷ ಎಂ.ಬಿ.ಮಹದೇವ ,ಉಪಾಧ್ಯಕ್ಷೆ ಬಿ.ಭಾಗ್ಯಾ (ಪಿಡಿಒ), ಉಪಾಧ್ಯಕ್ಷ ಮಹೇಶ್ (ಬಿಲ್ ಕಲೆಕ್ಟರ್), ಖಜಾಂಚಿ ಚನ್ನನಾಯಕ (ಪಿಡಿಒ), ಕಾರ್ಯದರ್ಶಿ ಗ್ರೇಡ್-1 ವರದರಾಜು, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಬಿ.ಚಂದ್ರು, ಕ್ರೀಡಾ ಕಾರ್ಯದರ್ಶಿ ಬಿಲ್ ಕಲೆಕ್ಟರ್ ವಿನೋದ್, ಸಾಂಸ್ಕೃತಿಕ ಕಾರ್ಯದರ್ಶಿ ಸರಸ್ವತಿ ಬಾಯಿ, ಆಂತರಿಕ ಲೇಕ್ಕ ಪರಿಶೋಧಕರು ಸಂಜಯ್, ನರೇಗಾ ಯೋಜನೆ ಅಧಿಕಾರಿ ಮಹದೇವಸ್ವಾಮಿ.