ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

IMG-20251019-WA0001
ನವಿಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಎನ್.ಡಿ.ಮಹದೇವ್, ಚೆನ್ನಪ್ಪ, ಚೆಲುವರಾಜ್, ಶಿವಪ್ಪ, ದೊಡ್ಡೇಗೌಡ, ಸ್ವಾಮಿ, ಜಯಮ್ಮ .ಪಲ್ಲವಿ, ಶಿವರಾಜ್ ಇದ್ದರು.
Published on

ಬೈಲುಕುಪ್ಪೆ: ತಾಲೂಕಿನ ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಯ 11 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ 9 ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾದರು. ಅದರಲ್ಲಿ ಸಾಮಾನ್ಯ ಕ್ಷೇತ್ರದಿಂದ 7 ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಸ್ಥಾನದಿಂದ ಒಬ್ಬ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗೌರಮ್ಮ ಹಾಗೂ ವೆಂಕಟೇಶ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ದೊಡ್ಡೇಗೌಡ, ಸ್ವಾಮಿ, ಜಯಮ್ಮ, ಚೆಲುವಯ್ಯ, ಜವರಯ್ಯ, ಪಲ್ಲವಿ, ಎನ್.ಕೆ.ಅಶ್ವಿನಿ, ನಿಂಗರಾಜು, ಶಿವರಾಜು ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಸರ್ಕಾರದ ನಾಮನಿರ್ದೇಶಿತ ಸದಸ್ಯ ಎನ್.ಎಸ್.ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಚನ್ನಪ್ಪ, ನವಿಲೂರು ಗ್ರಾಂಪಂ ಸದಸ್ಯರಾದ ಮಹಾದೇವ್, ಗ್ರಾಪಂ ಸದಸ್ಯ ಚೆಲುವರಾಜು, ಎನ್.ಡಿ.ಮಹದೇವ್, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಶಿವರಾಜ್, ಶ್ರೀನಿವಾಸ್, ಮಾಜಿ ಕಾರ್ಯದರ್ಶಿ ಶಿವಪ್ಪ, ಗ್ರಾಮದ ಮುಖಂಡರಾದ ರಾಜಣ್ಣ, ಜವರಯ್ಯ, ನಿಂಗರಾಜು, ಸ್ವಾಮಿಗೌಡ, ಶಿವಣ್ಣ, ಪ್ರಕಾಶ್, ರೇವಣ್ಣ, ಚಂದ್ರಶೇಖರ್, ಸ್ವಾಮಿ, ಕಾಳೇಗೌಡ, ಚಂದ್ರೇಗೌಡ, ರಾಜೇಗೌಡ, ದೇವರಾಜ್, ದಾಸಯ್ಯ, ವೆಂಕಟಯ್ಯ, ಎನ್.ಡಿ.ದೇವರಾಜು ಸಂಘದ ಕಾರ್ಯದರ್ಶಿ ರಾಜು, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಹಿತೇಂದ್ರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net